ದಂಪತಿಯಿಂದ 10 ಲಕ್ಷ ರೂ.ಗೆ ಬೇಡಿಕೆಯಿಟ್ಟ ನಾಲ್ವರು ಪೊಲೀಸರ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು ಜುಲೈ 24: ಇಂಟೀರಿಯರ್ ಡಿಸೈನರ್ ನಲ್ಲಿ ತೊಡಗಿದ್ದ ದಂಪತಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಇನ್ಸ್ ಪೆಕ್ಟರ್ ಮತ್ತು ಇತರ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ದೂರು ದಾಖಲಿಸಿದೆ.

- Advertisement -

ತನಿಖಾ ವರದಿಯನ್ನು ಜುಲೈ 26 ದಂದು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರಿಗೆ ಸಲ್ಲಿಸುವ ಸಾಧ್ಯತೆಯಿದೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಎ.ಸಿ.ಬಿ ಅಧಿಕಾರಿಯೊಬ್ಬರು, ವೈಟ್ಫೀಲ್ಡ್ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರೇಣುಕಾ, ಸಬ್ ಇನ್ಸ್ ಪೆಕ್ಟರ್ ಗಳಾದ ನವೀನ್, ಗಣೇಶ್ ಮತ್ತು ಕಾನ್ಸ್ ಟೆಬಲ್ ಹೇಮಂತ್ ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, 10 ಲಕ್ಷ ರೂಪಾಯಿ ನೀಡದಿದ್ದಲ್ಲಿ ಜೈಲಿಗೆ ಹಾಕುವುದಾಗಿ ಆರೋಪಿಗಳು ದೂರುದಾರ ದಂಪತಿಯನ್ನು ಬೆದರಿಸಿದ್ದಾರೆಂದು ತಿಳಿಸಿದ್ದಾರೆ.

5 ಲಕ್ಷ ಪಡೆದು ವಹಿಸಿದ ಕೆಲಸವನ್ನು ಪೂರ್ತಿಗೊಳಿಸದೇ ವಂಚಿಸಲಾಗಿದೆಯೆಂದು ಆರೋಪಿಸಿ ಸಬ್ ಇನ್ಸ್ ಪೆಕ್ಟರ್ ಗಣೇಶ್ ಅವರು ನಮ್ಮನ್ನು ಠಾಣೆಗೆ ಕರೆಯಿಸಿ ಮೇಲಿನ ಆರೋಪಿಗಳು 10 ಲಕ್ಷಕ್ಕಾಗಿ ಬೇಡಿಕೆಯಿಟ್ಟು ಬೆದರಿಸಿದ್ದಾರೆಂದು ಆರೋಪಿಸಿ ಸುದೀಪ್ ಮತ್ತು ಪತ್ನಿ ಶ್ವೇತಾ ಸಿಂಗ್ ದೂರು ದಾಖಲಿಸಿದ್ದಾರೆ.

- Advertisement -

ಆರೋಪಿಗಳ ವಿರುದ್ಧ ದೂರುದಾರರು ಸಾಕ್ಷಿಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ತನಿಖೆಗೆ ಕರೆಯಿಸಲಾಗುವುದೆಂದು ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Join Whatsapp