Home ಟಾಪ್ ಸುದ್ದಿಗಳು ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: ನಾಲ್ವರು ಸಾವು, ಹಲವು ಮಂದಿ ಗಂಭೀರ ಗಾಯ

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: ನಾಲ್ವರು ಸಾವು, ಹಲವು ಮಂದಿ ಗಂಭೀರ ಗಾಯ

ಛತ್ತೀಸ್ ಗಢ: ದಸರಾ ಮೆರವಣಿಗೆ ವೇಳೆ ಕಾರೊಂದು ಹತ್ತಾರು ಜನರ ಮೇಲೆ ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್ ಗಡದ ಜಶ್​​ಪುರ್​​ದಲ್ಲಿ ನಡೆದಿದೆ.


ಮೃತಪಟ್ಟ ಓರ್ವ ವ್ಯಕ್ತಿಯನ್ನು ಗೌರವ್ ಅಗರ್ ವಾಲ್ (21) ಎಂದು ಗುರುತಿಸಲಾಗಿದೆ. ಇನ್ನುಳಿದವರ ಗುರುತು ಪತ್ತೆಯಾಗಿಲ್ಲ.
ದಸರಾ ಮೆರವಣಿಗೆ ವೇಳೆ ವಿಗ್ರಹವನ್ನು ವಿಸರ್ಜಿಸಲು ನೂರಾರು ಜನರು ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ವೇಗವಾಗಿ ಬಂದ ಕಾರು ಏಕಾಏಕಿ ಹರಿದಿದೆ. ಇದರಿಂದ ಮೆರವಣಿಗೆಯಲ್ಲಿದ್ದವರು ಚಲ್ಲಾಪಿಲ್ಲಿಯಾಗಿದ್ದು, ಕೆಲವರು ಬಹುದೂರ ಎಸೆಯಲ್ಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಈ ಕುರಿತ ವೀಡಿಯೋ ವೈರಲ್ ಆಗಿದ್ದು, ಅದರ ದೃಶ್ಯ ಭಯಾನಕವಾಗಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ಕಾರು ಹರಿದು ನಾಲ್ವರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಬ್ಬರು ಆರೋಪಿಗಳಾದ ಬಬ್ಲು ವಿಶ್ವಕರ್ಮ ಮತ್ತು ಶಿಶುಪಾಲ್ ಸಾಹು ಎಂಬವರನ್ನು ಬಂಧಿಸಲಾಗಿದೆ. ಅವರಿಬ್ಬರೂ ಮಧ್ಯಪ್ರದೇಶ ನಿವಾಸಿಗಳಾಗಿದ್ದು, ಛತ್ತೀಸ್ ಗಡ ಮೂಲಕ ತೆರಳುತ್ತಿದ್ದರು ಎಂದು ಜಸ್ಪುರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Join Whatsapp
Exit mobile version