ಹರಿಯಾಣದ ಕರ್ನಾಲ್’ನಲ್ಲಿ ಕಟ್ಟಡ ಕುಸಿತ: ನಾಲ್ವರು ಮೃತ್ಯು, 20 ಜನರಿಗೆ ಗಾಯ

Prasthutha|

ಚಂಡೀಗಡ: ಹರಿಯಾಣದ ಕರ್ನಾಲ್’ನಲ್ಲಿ ಮೂರು ಮಹಡಿಗಳ ಅಕ್ಕಿ ಮಿಲ್ ಒಂದು ಬಿದ್ದು ನಾಲ್ವರು ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

- Advertisement -


ಸೋಮವಾರ ರಾತ್ರಿ ಕಟ್ಟಡ ಕುಸಿದು ನಾಲ್ವರು ಸಾವಿಗೀಡಾಗಿದ್ದು, 20 ಮಂದಿ ಗಾಯಾಳುಗಳಾಗಿದ್ದಾರೆ. ಸೋಮವಾರ ರಾತ್ರಿ ಈ ಕಟ್ಟಡ ಬಿದ್ದಾಗ ಇದರಲ್ಲಿ 150 ಜನರು ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಅವಶೇಷಗಳಡಿ ಹಾಕಿಕೊಂಡಿದ್ದಾರೆ. ಎನ್ ಡಿಆರ್ ಎಫ್ -ರಾಷ್ಟ್ರೀಯ ವಿಪತ್ತು ಪ್ರಕ್ರಿಯಾ ಪಡೆ ಮತ್ತು ಎಸ್ ಡಿಆರ್ ಎಫ್ -ರಾಜ್ಯ ವಿಪತ್ತು ಪ್ರಕ್ರಿಯಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
“4 ಶವಗಳು ಮತ್ತು ಗಾಯಗೊಂಡ 20 ಜನರನ್ನು ಹೊರಗೆ ತರಲಾಗಿದೆ. ಇನ್ನುಳಿದವರು ಒಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ” ಎಂದು ಕರ್ನಾಲ್ ಡೆಪ್ಯೂಟಿ ಕಮಿಶನರ್ ಅನೀಶ್ ಯಾದವ್ ಹೇಳಿದರು.


ಕಟ್ಟಡವು ಕೆಲವು ದೋಷಗಳನ್ನು ಹೊಂದಿತ್ತು ಎನ್ನಲಾಗಿದೆ.
ತನಿಖೆಗೆ ಸಮಿತಿ ರಚಿಸಲಾಗುತ್ತಿದೆ ಮತ್ತು ಅಕ್ಕಿ ಮಿಲ್ ಮಾಲಿಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಾದವ್ ತಿಳಿಸಿದರು.

Join Whatsapp
Exit mobile version