ಕಾಲ್ತುಳಿತಕ್ಕೆ ಒಳಗಾಗಿ ನಾಲ್ಕು ದಿನದ ಶಿಶು ಸಾವು: ಪೊಲೀಸರ ವಿರುದ್ಧ FIR ದಾಖಲು

Prasthutha|

ರಾಂಚಿ: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಆರೋಪಿಗಳ ಹುಡುಕಾಟದ ವೇಳೆ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ದಿನದ ಶಿಶು ಮೃತಪಟ್ಟಿರುವ ಘಟನೆ ನಡೆದಿದೆ.

- Advertisement -

ನ್ಯಾಯಾಲಯ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದ್ದರು.

ನಾಲ್ಕು ದಿನದ ಶಿಶುವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ಉಲ್ಲೇಖಿಸಿಲಾಗಿದೆ.

- Advertisement -

ಸಂಗಮ್ ಪಾಠಕ್ ಮತ್ತು ಎಸ್.ಕೆ ಮಂಡಲ್ ಸೇರಿದಂತೆ ಗಿರಿದಿಹ್’ನ ಡಿಯೋರಿ ಪೊಲೀಸ್ ಠಾಣೆಯ ಆರು ಪೊಲೀಸರ ವಿರುದ್ಧ ಎಫ್‌ಐಆ‌ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇವರಲ್ಲಿ ಐವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Join Whatsapp