ಮಹಿಳೆಯ ಬಟ್ಟೆ ಬಿಚ್ಚಿ ಥಳಿಸಿದ ಯುವಕರು: ನಾಲ್ವರು ವಶಕ್ಕೆ

Prasthutha|

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಹಿಳೆಯೊಬ್ಬರನ್ನು ಬಟ್ಟೆ ಬಿಚ್ಚಿ ಥಳಿಸಿದ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ.


ವೈರಲ್ ಆದ ವೀಡಿಯೋದಲ್ಲಿ ಕಾಲಿಗೆ ಬೀಳುತ್ತೇನೆ, ಹೊಡೆಯಬೇಡಿ ಎಂದು ಮಹಿಳೆ ಅಂಗಲಾಚುತ್ತಿರುವುದು, ಇದೇ ವೇಳೆ ನಿಷ್ಕಾರುಣವಾಗಿ ನಾಲ್ವರು ಯುವಕರು ಆಕೆಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಏಳೆಂಟು ತಿಂಗಳ ಹಿಂದಿನ ವೀಡಿಯೋ ಇದಾಗಿದ್ದು, ಮಹಿಳೆ ಯಾರೆಂದು ಗೊತ್ತಾಗಿಲ್ಲ. ಪೊಲೀಸರು ಸದ್ಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಹಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -