Home ಟಾಪ್ ಸುದ್ದಿಗಳು ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಆರ್ ಬಾಲಕೃಷ್ಣ ಪಿಳ್ಳೈ ನಿಧನ

ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಆರ್ ಬಾಲಕೃಷ್ಣ ಪಿಳ್ಳೈ ನಿಧನ

►ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ತಂದೆ

ಕೊಲ್ಲಮ್: ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಆರ್ ಬಾಲಕೃಷ್ಣ ಪಿಳ್ಳೈ(86) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಬುಧವಾರ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

ಕೇರಳ ಕಾಂಗ್ರೆಸ್ ನ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದ  ಪಿಳ್ಳೈ, ಸರ್ಕಾರದ ಅಬಕಾರಿ, ಸಾರಿಗೆ ಮತ್ತು ವಿದ್ಯುಚ್ಛಕ್ತಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪಿಳ್ಳೈ ಅವರ ಮಗ ಮಾಜಿ ಸಚಿವ ಕೆ ಬಿ ಗಣೇಶ್ ಕುಮಾರ್ ನಿನ್ನೆ ಕೇರಳದ ಪತ್ತನಪುರಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

Join Whatsapp
Exit mobile version