Home ಟಾಪ್ ಸುದ್ದಿಗಳು ಪತ್ರಕರ್ತರಿಗೆ ಬೈದು ಹೊರಗೆ ತಳ್ಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಪತ್ರಕರ್ತರಿಗೆ ಬೈದು ಹೊರಗೆ ತಳ್ಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿ ಪತ್ರಕರ್ತರನ್ನು ಹೊರಗಟ್ಟಿದ್ದಾರೆ. ಸಭೆಯಲ್ಲಿ ಬ್ಯಾನರ್ ವಿಚಾರವಾಗಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾದಾಗ ಆ ದೃಶ್ಯವನ್ನು ಸೆರೆ ಹಿಡಿಯಲು ಹೆಣಗಾಡುತ್ತಿದ್ದ ಪತ್ರಕರ್ತರ ಮೇಲೆ ರಮೇಶ್ ರೇಗಾಡಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಇತ್ತು. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಎಚ್ ಮುನಿಯಪ್ಪ ಬಣದ ನಡುವೆ ಕಿತ್ತಾಟ ಶುರುವಾಗಿದೆ. ಇದು ಕೆ.ಎಚ್ ಮುನಿಯಪ್ಪ ಫೋಟೋ ಬ್ಯಾನರ್ನಲ್ಲಿ ಹಾಕದ ವಿಚಾರಕ್ಕೆ ಕಾರ್ಯಕರ್ತರ ನಡೆರ ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತ್ತು.

ಈ ಕಿತ್ತಾಟದ ದೃಶ್ಯ ಸೆರೆ ಹಿಡಿಯುತ್ತಿದ್ದಾಗ ಇಬ್ಬರು ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಗರಂ ಆಗಿದ್ದು. ಪತ್ರಕರ್ತರನ್ನು ಹೊರಗೆ ಹೋಗಿ ಎಂದು ತಳ್ಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಮೇಶ್ ಕುಮಾರ್ ಈ ನಡೆ ವಿರುದ್ಧ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Join Whatsapp
Exit mobile version