Home ಟಾಪ್ ಸುದ್ದಿಗಳು ರಷ್ಯಾದ ಮಾಜಿ ಅಧ್ಯಕ್ಷ ಗೊರ್ಬಚೆವ್ ನಿಧನ

ರಷ್ಯಾದ ಮಾಜಿ ಅಧ್ಯಕ್ಷ ಗೊರ್ಬಚೆವ್ ನಿಧನ

ಮಾಸ್ಕೊ: ರಷ್ಯಾದ ಮಾಜಿ ಅಧ್ಯಕ್ಷ, ಸೋವಿಯತ್ ಒಕ್ಕೂಟದ (ಯುಎಸ್ ಎಸ್ ಆರ್) ಕೊನೆಯ ನಾಯಕ ಮಿಖಾಯಿಲ್ ಗೊರ್ಬಚೆವ್ (92) ಮಂಗಳವಾರ ನಿಧನರಾಗಿದ್ದಾರೆ.


ಶೀತಲ ಸಮರವನ್ನು ರಕ್ತಪಾತವಿಲ್ಲದೆ ಕೊನೆಗೊಳಿಸಿದ್ದ ಖ್ಯಾತಿ ಗೊರ್ಬಚೆವ್ ಗೆ ಸಲ್ಲುತ್ತದೆ. ಆದರೂ ಸೋವಿಯತ್ ಒಕ್ಕೂಟದ ಪತನವನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ.


ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಗೊರ್ಬಚೆವ್ ನಿಧನರಾಗಿದ್ದಾರೆ ಎಂದು ರಷ್ಯಾದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ತಿಳಿಸಿದೆ.

Join Whatsapp
Exit mobile version