ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಒಬ್ಬ ಜಿಹಾದಿ ಆಗಿದ್ದ : ಯತಿ ನರಸಿಂಹಾನಂದ ಸರಸ್ವತಿ

Prasthutha|

ಗಾಝಿಯಾಬಾದ್: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಒಬ್ಬ ಜಿಹಾದಿ ಆಗಿದ್ದನು. ಉನ್ನತ ಸ್ಥಾನದಲ್ಲಿರುವ ಯಾವುದೇ ಮುಸ್ಲಿಮ್ ಭಾರತದ ಬೆಂಬಲಿಗನಾಗಲು ಸಾಧ್ಯವಿಲ್ಲ ಎಂದು ಗಾಝಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಕೋಮು ದ್ವೇಷದ ಹೇಳಿಕೆ ನೀಡಿದ್ದಾರೆ. ಅವರು ಅಲಿಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

- Advertisement -

ಹಿಂದುತ್ವ ನಾಯಕನಾದ ಯತಿ ನರಸಿಂಹಾನಂದ ಸರಸ್ವತಿ, ದೇವಸ್ಥಾನದೊಳಗೆ ಪ್ರವೇಶಿಸಿ ನೀರು ಕುಡಿದ ಎಂಬ ಕಾರಣಕ್ಕೆ ಮುಸ್ಲಿಂ ಬಾಲಕನನ್ನು ಕ್ರೂರವಾಗಿ ಥಳಿಸಿದ ದೇವಾಲಯದ ಅರ್ಚಕ. ಬಾಲಕನಿಗೆ ಥಳಿಸಿರುವುದನ್ನು ಸಮರ್ಥಿಸಿ ಆರೋಪಿಯನ್ನು ಹೊಗಳಿದ ಯತಿ ನರಸಿಂಹಾನಂದ ಸರಸ್ವತಿ, ದೇವಸ್ಥಾನದಲ್ಲಿ ಅತಿಕ್ರಮಣ ಮಾಡುವವರನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ. “ಯಾವುದೇ ಉನ್ನತ ಹುದ್ದೆಯಲ್ಲಿರುವ ಮುಸ್ಲಿಂ ಭಾರತದ ಬೆಂಬಲಿಗನಾಗಲು ಸಾಧ್ಯವಿಲ್ಲ. ಕಲಾಂ ಒಬ್ಬ ಜಿಹಾದಿಯಾಗಿದ್ದ. ಮುಸ್ಲಿಮರ ಸಮಸ್ಯೆಗಳನ್ನು ಪರಿಹರಿಸಲು ಕಲಾಂ ರಾಷ್ಟ್ರಪತಿ ಭವನದಲ್ಲಿ ವಿಶೇಷ ವಿಭಾಗವನ್ನು ಸ್ಥಾಪಿಸಿದ್ದನು. ಡಿಆರ್‌ಡಿಒ ಮುಖ್ಯಸ್ಥನಾಗಿ ಕಲಾಂ ಭಾರತದ ಪರಮಾಣು ರಹಸ್ಯಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ್ದಾನೆ ಎಂದು ನರಸಿಂಹಾನಂದ ಆರೋಪಿಸಿದ್ದಾರೆ.

Join Whatsapp