Home ಟಾಪ್ ಸುದ್ದಿಗಳು ಮಾಜಿ ಪೋಪ್‌ 16ನೇ ಬೆನೆಡಿಕ್ಟ್ ನಿಧನ

ಮಾಜಿ ಪೋಪ್‌ 16ನೇ ಬೆನೆಡಿಕ್ಟ್ ನಿಧನ

ವ್ಯಾಟಿಕನ್‌ ಸಿಟಿ: ಮಾಜಿ ಪೋಪ್‌ 16ನೇ ಬೆನೆಡಿಕ್ಟ್‌ (95) ಅವರು ಶನಿವಾರ ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ ನಿಧನರಾಗಿದ್ದಾರೆ ಎಂದು ವ್ಯಾಟಿಕನ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

2013ರಲ್ಲಿ ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬೆನೆಡಿಕ್ಟ್‌ ಅವರು 600 ವರ್ಷಗಳ ಇತಿಹಾಸದಲ್ಲೇ ಪೋಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಜರ್ಮನಿಯ ದೇವತಾಶಾಸ್ತ್ರಜ್ಞರಾಗಿದ್ದರು.

ಅವರ ಪಾರ್ಥಿವ ಶರೀರವನ್ನು ಸೇಂಟ್‌ ಪೀಟರ್ಸ್‌ ಬೆಸಿಲಿಕಾದಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು.

Join Whatsapp
Exit mobile version