Home ಟಾಪ್ ಸುದ್ದಿಗಳು ಪ್ರತಿ ಇಲಾಖೆಯಲ್ಲೂ ಸರ್ಕಾರಿ ಹುದ್ದೆಗಳ ಮಾರಾಟ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆರೋಪ

ಪ್ರತಿ ಇಲಾಖೆಯಲ್ಲೂ ಸರ್ಕಾರಿ ಹುದ್ದೆಗಳ ಮಾರಾಟ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆರೋಪ

ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರ್ಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ.


ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಸುದ್ದಿ ಕೇಳಿ ದುಃಖವಾಯಿತು, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರ್ಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ, ಇದಕ್ಕೆಲ್ಲ ಸ್ಥಳೀಯ ಶಾಸಕರು, ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಯೇ ಕಾರಣ ಎಂದೂ ಅವರು ದೂರಿದ್ದಾರೆ.


ಪ್ರತಿ ಹುದ್ದೆಯೂ ಲಕ್ಷದಿಂದ ಕೋಟಿ ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದು ಬಿಜೆಪಿ ಅವಧಿಯಲ್ಲಿ ಮಾತ್ರ ಎಂದೇನೂ ಅಲ್ಲ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ನಡೆದಿತ್ತು ಎಂದು ಆರೋಪಿಸಿದ್ದಾರೆ.


ಇದೇ ವೇಳೆ ಪೊಲೀಸರಿಗೆ ಕಿವಿಮಾತು ಕೂಡ ಹೇಳಿರುವ ಅವರು, ನೀವು ಸಾವಿಗೀಡಾದರೆ ಆ ಸ್ಥಾನಕ್ಕೆ ಇನ್ನೊಬ್ಬನನ್ನು ನೇಮಕ ಮಾಡುತ್ತಾರೆ. ಆದರೆ ನಿಮ್ಮ ಮನೆಯವರಿಗೆ ಪರ್ಯಾಯ ಇರುವುದಿಲ್ಲ. ಒಂದು ವೇಳೆ ನೀವೂ ದುಡ್ಡು ಕೊಟ್ಟು ಬಂದಿದ್ದರೂ ತಲೆ ಕೆಡಿಸಿಕೊಳ್ಳಬೇಡಿ, ದುಡ್ಡು ಹೋದರೆ ಹೋಗಲಿ, ಆರೋಗ್ಯ ಕಾಪಾಡಿಕೊಳ್ಳಿ, ನಿಮ್ಮ ಪ್ರಾಣ ಮುಖ್ಯ ಎಂದು ಭಾಸ್ಕರ್ ರಾವ್ ಸಲಹೆ ನೀಡಿದ್ದಾರೆ.

Join Whatsapp
Exit mobile version