ಮುಂಬೈ ಇಂಡಿಯನ್ಸ್​ಗೆ ಮುಳುವಾದ ಮಾಜಿ ಪ್ಲೇಯರ್​: 10 ವರ್ಷದ ಬಳಿಕ ಗೆದ್ದ RCB

- Advertisement -

ಐಪಿಎಲ್​ ನ 20ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ.

- Advertisement -

ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ದ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಮಣಿಸಿದೆ.

ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ್ದ ಬೃಹತ್ ಗುರಿಯೊಂದಿಗೆ ಮೈದಾನಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿತ್ತು. ಕೇವಲ 1.3 ಓವರ್​ಗಳಲ್ಲೆ 21 ರನ್​ ಬಾರಿಸಿತು. ರೋಹಿತ್ ಶರ್ಮಾ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 17 ರನ್​ ಬಾರಿಸಿದ್ದರು. ಆದರೆ ಯಶ್​ ದಯಾಲ್ ​ಎಸೆತದಲ್ಲಿ ಪೆವಿಲಿಯ್​ ಸೇರಿದರು.

- Advertisement -

ನಂತರ ವಿಲ್ ಜಾಕ್ಸ್ (22) ಮತ್ತು ಸೂರ್ಯಕುಮಾರ್ ಯಾದವ್ (28) ರನ್ ಗಳಿಸಲು ಕಷ್ಟಪಟ್ಟರು. ಇದರಿಂದಾಗಿ ಮುಂಬೈ ರನ್​ ವೇಗಕ್ಕೆ ಬ್ರೇಕ್​ ಬಿದಿತ್ತು. ಈ ಇಬ್ಬರ ನಿರ್ಗಮನದ ಬಳಿಕ ಅಬ್ಬರಿಸಿದ ತಿಲಕ್ ವರ್ಮಾ (56) ಮತ್ತು ಹಾರ್ದಿಕ್ ಪಾಂಡ್ಯ (42) ಪಂದ್ಯಕ್ಕೆ ತಿರುವು ನೀಡಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಪಂದ್ಯ ಕೊನೆಯ ಓವರ್‌ ವರೆಗೆ ಸಾಗಿತು.

ಕೊನೆಯ ಎರಡು ಓವರ್‌ಗಳಲ್ಲಿ 28 ರನ್‌ಗಳು ಬೇಕಾಗಿದ್ದಾಗ, ಹ್ಯಾಜಲ್‌ವುಡ್ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದರು. ಆದರೆ ಅಂತಿಮ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಅದ್ಭುತ ಬೌಲಿಂಗ್​ ಮಾಡಿ ಕೇವಲ ಆರು ರನ್ ನೀಡಿ 3 ವಿಕೆಟ್ ಪಡೆದರು. ಇದರೊಂದಿಗೆ ಆರ್‌ಸಿಬಿ ಐಪಿಎಲ್​ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿತು.

10 ವರ್ಷದ ಬಳಿಕ ಗೆಲುವು: ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ತಂಡ 10 ವರ್ಷದ ಬಳಿಕ ಮುಂಬೈ ತಂಡವನ್ನು ಮಣಿಸಿ ಗೆಲುವು ಸಾಧಿಸಿತು. ಈ ಹಿಂದೆ 2015ರಲ್ಲಿ ಕೊನೆಯ ಬಾರಿಗೆ ಈ ಮೈದಾನದಲ್ಲಿ ಗೆಲುವು ಸಾಧಿಸಿತ್ತು.

- Advertisement -


Must Read

Related Articles