ಜಮಾಅತೆ ಇಸ್ಲಾಮಿ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಕೆ.ಎ.ಸಿದ್ದೀಕ್ ಹಸನ್ (76) ನಿಧನರಾಗಿದ್ದಾರೆ. ಅವರು ವಯೋ ಸಹಜ ಕಾಯಿಲೆಯಿಂದಾಗಿ ದೀರ್ಘಕಾಲ ವಿಶ್ರಾಂತಿ ಪಡೆಯುತ್ತಿದ್ದರು.
ಮಾಧ್ಯಮಂ ಮಲಯಾಳಂ ದೈನಿಕ ದ ಚೇರ್ಮೆನ್ ಆಗಿದ್ದ ಕೆ.ಎ.ಸಿದ್ದೀಕ್ ಹಸನ್ ಸಾಹೇಬರು ಪ್ರಸಿದ್ಧ ಬರಹಗಾರರಾಗಿ, ಇಸ್ಲಾಮಿಕ್ ವಿದ್ವಾಂಸರಾಗಿ, ವಾಗ್ಮಿಯಾಗಿ, ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಜನಪ್ರಿಯರಾಗಿದ್ದರು.
ಮೇ 5, 1945 ರಂದು ಜನಿಸಿದ ಅವರು ಫಾರೂಕ್ ರೌಲತುಲ್ ಉಲೂಮ್ ಅರೇಬಿಕ್ ಕಾಲೇಜು ಮತ್ತು ಶಾಂತಪುರಂ ಇಸ್ಲಾಮಿಯಾ ಕಾಲೇಜಿನಿಂದ ಅಫ್ಲಲುಲ್ ಉಲಮಾ ಮತ್ತು ಎಂ.ಎ. ಪದವಿ ಪಡೆದಿದ್ದಾರೆ. ಅವರು ತಿರುವನಂತಪುರಂ ವಿಶ್ವವಿದ್ಯಾಲಯ, ಎರ್ನಾಕುಳಂ ಮಹಾರಾಜಾಸ್ ಕಾಲೇಜು, ಕೊಯಿಲಾಂಡಿ, ಕೊಡಂಚೇರಿ ಮತ್ತು ಕಾಸರಗೋಡುಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು. ಅವರು ಐಡಿಯಲ್ ಪಬ್ಲಿಕೇಶನ್ ಟ್ರಸ್ಟ್‌ನ ಮೊದಲ ಕಾರ್ಯದರ್ಶಿಯಾಗಿದ್ದರು ಮತ್ತು ಪ್ರಬೋಧನಂ ವಾರಪತ್ರಿಕೆಯ ಸಹ ಸಂಪಾದಕ ಮತ್ತು ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾತ್ರಿ 8 ಗಂಟೆಗೆ ಮಯ್ಯತ್ ನಮಾಝ್ ನಡೆಯಲಿದೆ ಎಂದು ಅವರ ಹಿರಿಯ ಪುತ್ರ ಫಝಲುರ್ರಹ್ಮಾನ್ ತಿಳಿಸಿದ್ದಾರೆ.
ಪತ್ನಿ: ವಿ.ಕೆ.ಝುಬೈದಾ. ಮಕ್ಕಳು: ಫಝಲುರ್ರಹ್ಮಾನ್, ಶರಫುದ್ದೀನ್, ಅನೀಸುರ್ರಹ್ಮಾನ್ ಮತ್ತು ಸಾಬಿರಾ.