Home ಟಾಪ್ ಸುದ್ದಿಗಳು ಸಿಎಂ ಆದಿತ್ಯನಾಥ್ ಪ್ರಾಮಾಣಿಕ ವ್ಯಕ್ತಿ ಎಂದ ಮಾಜಿ ಸಂಸದ ಅತೀಕ್ ಅಹ್ಮದ್

ಸಿಎಂ ಆದಿತ್ಯನಾಥ್ ಪ್ರಾಮಾಣಿಕ ವ್ಯಕ್ತಿ ಎಂದ ಮಾಜಿ ಸಂಸದ ಅತೀಕ್ ಅಹ್ಮದ್

ಲಖನೌ: ಯೋಗಿ ಆದಿತ್ಯನಾಥ್ ಅವರು ಧೈರ್ಯಶಾಲಿ ಹಾಗೂ ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಮಾಜಿ ಸಂಸದ ಅತೀಕ್ ಅಹ್ಮದ್ ಹೇಳಿದ್ದು, ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.


ಸಮಾಜವಾದಿ ಪಕ್ಷದಿಂದ ಲೋಕಸಭೆ ಹಾಗೂ ವಿಧಾನಸಭೆಗೆ ಆಯ್ಕೆಯಾಗಿದ್ದ ಅತೀಕ್ ಅಹ್ಮದ್ ಮಾಫಿಯಾ ಡಾನ್ ಕೂಡ ಹೌದು. ಕೊಲೆ ಹಾಗೂ ಇತರ ಪ್ರಕರಣಗಳ ಆರೋಪಿಯಾದ ಅತೀಕ್ ಅಹ್ಮದ್ ನನ್ನು ಸದ್ಯ ಗುಜರಾತ್ ನ ಸಬರಮತಿ ಜೈಲಿನಲ್ಲಿ ಇರಿಸಲಾಗಿದೆ.
ಗುರುವಾರ ಲಖನೌ ಪೊಲೀಸರು ಸಿಬಿಐ ವಿಶೇಷ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಅತೀಕ್ ಅಹ್ಮದ್ ನನ್ನು ಹಾಜರುಪಡಿಸಿದ್ದಾರೆ. ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅತೀಕ್ ಅಹ್ಮದ್, ಯೋಗಿ ಆದಿತ್ಯನಾಥ್ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.


ಆದಿತ್ಯನಾಥ್ ಸರ್ಕಾರವು ಅತೀಕ್ ಅಹ್ಮದ್ ಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಗಳ ಮೇಲೂ ಬುಲ್ಡೋಜರ್ ಚಲಾಯಿಸಿದೆ. ಇದರ ನಡುವೆಯೂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು, ಚರ್ಚೆಗೆ ಗ್ರಾಸವಾಗಿದೆ.

Join Whatsapp
Exit mobile version