Home ಟಾಪ್ ಸುದ್ದಿಗಳು ಮಾಜಿ ಶಾಸಕ ಮುಕ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ

ಮಾಜಿ ಶಾಸಕ ಮುಕ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ

ಘಾಜಿಪುರ: 2009ರ ಗ್ಯಾಂಗ್ ಸ್ಟರ್ ಕಾಯ್ದೆ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ ಉತ್ತರ ಪ್ರದೇಶದ  ಘಾಜಿಪುರ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ  ನ್ಯಾಯಾಲಯವು ಅನ್ಸಾರಿಗೆ 5 ಲಕ್ಷ ರೂ.ಗಳ ದಂಡವನ್ನೂ ವಿಧಿಸಿದೆ.

ಗಾಜಿಪುರ ಜಿಲ್ಲೆಯ ವಿಶೇಷ ನ್ಯಾಯಾಧೀಶ  ಅರವಿಂದ್ ಮಿಶ್ರಾ 2009 ರ ಗ್ಯಾಂಗ್ಸ್ಟರ್ ಕಾಯ್ದೆ ಪ್ರಕರಣದಲ್ಲಿ ಅನ್ಸಾರಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಸೆಪ್ಟೆಂಬರ್ 2022 ರಿಂದ ಅನ್ಸಾರಿ ಅವರ ದೊರೆಯುತ್ತಿರುವ  ಆರನೇ ಶಿಕ್ಷೆ ಇದಾಗಿದೆ.

ಏಪ್ರಿಲ್ 2023 ರಲ್ಲಿ, ಗಾಜಿಪುರ ಸಂಸದ-ಶಾಸಕ ನ್ಯಾಯಾಲಯವು ಬಿಜೆಪಿ ಶಾಸಕ ಕೃಷ್ಣಾನಂದ್ ರಾಯ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮತ್ತು  ಒಂದು ಗ್ಯಾಂಗ್ಸ್ಟರ್ಸ್ ಕಾಯ್ದೆ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಪರಿಗಣಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Join Whatsapp
Exit mobile version