Home ಕರಾವಳಿ ಪುತ್ತಿಲ ಬಿಜೆಪಿ ಸೇರ್ಪಡೆಗೆ ಷರತ್ತು ವಿಧಿಸಿದ ಮಾಜಿ‌ ಶಾಸಕ ಮಠಂದೂರು!

ಪುತ್ತಿಲ ಬಿಜೆಪಿ ಸೇರ್ಪಡೆಗೆ ಷರತ್ತು ವಿಧಿಸಿದ ಮಾಜಿ‌ ಶಾಸಕ ಮಠಂದೂರು!

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆದು ಪುತ್ತಿಲ ಪರಿವಾರ ಸ್ಥಾಪಿಸಿರುವ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಪಾಳಯ ಸೇರಲು ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಹಸುರು ನಿಶಾನೆ ಸಿಕ್ಕಿರುವಾಗಲೇ ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತಿಲ ಸೇರ್ಪಡೆಗೆ ಬಹಿರಂಗವಾಗಿ ಷರತ್ತು ವಿಧಿಸಿದ್ದಾರೆ.

ವೀಡಿಯೊವೊಂದರಲ್ಲಿ ಮಾತನಾಡಿರುವ ಸಂಜೀವ ಮಠಂದೂರು, ಪುತ್ತಿಲ ಬಿಜೆಪಿಗೆ ಬರುವುದಕ್ಕೆ ಸ್ವಾಗತ. ಆದರೆ ಪಕ್ಷ ಸೇರ್ಪಡೆಗೆ ಮೊದಲು ಅವರು ತಮ್ಮ ಸಂಘಟನೆಯನ್ನು ವಿಸರ್ಜಿಸಬೇಕು ಹಾಗೂ ಹಿರಿಯರಿಗೆ ನೋವುಂಟು ಮಾಡುವ ರೀತಿಯಲ್ಲಿ ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

Join Whatsapp
Exit mobile version