ಮೈಸೂರು: ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಮಹಿಷಾ ದಸರಾ ಮುಗಿಯುವವರಗೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ ಎಂದು ಮಾಜಿ ಮೇಯರ್ ಪುರುಷೋತ್ತಮ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಿತಿ ವತಿಯಿಂದ ಅವರನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇವೆ. ಇವರು ಸಂಘರ್ಷಕ್ಕೂ ಸಿದ್ದ ಎಂಬ ಪದ ಬಳಸಿದ್ದಾರೆ. ಅವರನ್ನು ಯಾರು ಸಂಘರ್ಷಕ್ಕೆ ಕರೆದಿದ್ದಾರೆ ಅವರೊಟ್ಟಿಗೆ ಸಂಘರ್ಷ ಮಾಡಲಿ. ಅವರ ಹೇಳಿಕೆ ನೋಡುತ್ತ ಕುಳಿತಿರುವ ಪೋಲಿಸರು ಮತ್ತು ಜಿಲ್ಲಾಡಳಿತ ಈಗಾಗಲೇ ಅವರನ್ನು ಬಂಧಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಸಂಸದ ಪ್ರತಾಪ್ ಸಿಂಹ ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಕರೆ ನೀಡಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ. ಪ್ರತಾಪಸಿಂಹ ಅವರಂತರಹ ಸಂಸದರನ್ನು ನಾನು ಕಂಡಿಲ್ಲ. ವೈಯಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ. ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ ಎಂದರು.