ಕೇರಳ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ

Prasthutha|

ಕೇರಳ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಕೇರಳ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ವಿಜಯನ್ ಥೋಮಸ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಗೆ ದೊಡ್ಡ ಆಘಾತವಾಗಿದೆ.

- Advertisement -

 ಈಗಾಗಲೇ ಕಾಂಗ್ರೆಸ್ ನ ಹಿರಿಯ ನಾಯಕ ಪಿಸಿ ಚಾಕೋ ಬುಧವಾರ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ನಾಯಕ ಈ ನಿರ್ಧಾರ ಪ್ರಕಟಿಸಿರುವುದು ಕೇರಳ ಕಾಂಗ್ರೆಸ್ ಮಟ್ಟಿಗೆ ಇದು ದೊಡ್ಡ ಹೊಡೆತವಾಗಿದೆ. “ಕೇರಳದಲ್ಲಿ ಕಾಂಗ್ರೆಸ್(ಐ) ಮತ್ತು ಕಾಂಗ್ರೆಸ್(ಎ) ಎಂಬ ಎರಡು ಪಕ್ಷಗಳಿದ್ದು, ಆ ಎರಡೂ ಬಣಗಳಲ್ಲಿ ನಿಷ್ಠೆಯಿಂದ ಇದ್ದವರಿಗೆ ಮಾತ್ರ ಅವಕಾಶ. ಎರಡೂ ಬಣಗಳಿಂದ ಹೊರಗೆ ಉಳಿದವರನ್ನು ಯಾರೂ ಕ್ಯಾರೇ ಅನ್ನುವುದಿಲ್ಲ” ಎಂದು ವಿಜಯನ್ ಥೋಮಸ್ ಹೇಳಿದ್ದಾರೆ.

140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.

Join Whatsapp