Home ಟಾಪ್ ಸುದ್ದಿಗಳು ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೇನ್ ಆಗಸ್ಟ್ 30ರಂದು ಬಿಜೆಪಿ ಸೇರ್ಪಡೆ

ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೇನ್ ಆಗಸ್ಟ್ 30ರಂದು ಬಿಜೆಪಿ ಸೇರ್ಪಡೆ

ನವದೆಹಲಿ: ಜಾರ್ಖಂಡ್‌‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಆಗಸ್ಟ್ 30 ರಂದು ಅಧಿಕೃತವಾಗಿ ರಾಂಚಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ.

ಸೋರೆನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಸಭೆಯ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಶರ್ಮಾ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ನಮ್ಮ ದೇಶದ ಪ್ರತಿಷ್ಠಿತ ಆದಿವಾಸಿ ನಾಯಕ, ಚಂಪೈ ಸೊರೇನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಲ್ಪ ಸಮಯದ ಹಿಂದೆ ಭೇಟಿಯಾದರು. ಅವರು ಆಗಸ್ಟ್ 30 ರಂದು ರಾಂಚಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version