ನವದೆಹಲಿ: ಅಮೆರಿಕದಲ್ಲಿನ ಮಾಜಿ ಭಾರತೀಯ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತರಣ್ ಜಿತ್ ಅವರು ಅಮೆರಿಕದಲ್ಲಿನ ಭಾರತದ 28ನೇ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಶ್ರೀಲಂಕಾದಲ್ಲಿನ ಭಾರತದ ಹೈಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಸಂಧು ಅವರು ಪಂಜಾಬ್ ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.