ನವದೆಹಲಿ: ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (ನಿವೃತ್ತ) ಆರ್ಕೆಎಸ್ ಭದೌರಿಯಾ ಬಿಜೆಪಿ ಸೇರಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದರು.
ಮುಂದಿನ ತಿಂಗಳಿನಿಂದ ಲೋಕಸಭಾ ಚುನಾವಣೆಗೆ ನಡೆಯಲಿದ್ದು, ಮಾಜಿ ನ್ಯಾಯಾಧೀಶರುಗಳು ಬಿಜೆಪಿ ಸೇರುತ್ತಿರುವುದರ ಜೊತೆಗೆ ಐಎಎಫ್ ಮುಖ್ಯಸ್ಥ ಬಿಜೆಪಿ ಸೇರಿದಂತಾಗಿದೆ.