ಪಣಜಿ: ಗೋವಾದ ಮಾಜಿ ಶಾಸಕ ಸೇರಿದಂತೆ ಐವರು ತೃಣಮೂಲ ಕಾಂಗ್ರೆಸ್(TMC) ಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷಕ್ಕೆ ಸೇರಿದ ಮೂರು ತಿಂಗಳಲ್ಲೇ ರಾಜೀನಾಮೆ ನೀಡಿ TMC ವಿರುದ್ಧ ಹರಿಹಾಯ್ದ ಮಾಜಿ ಶಾಸಕ ಲಾವೂ ಮಮಲ್ದರ್, ಪಕ್ಷವು ಕೋಮುವಾದಿಯಾಗಿದ್ದು, ಓಟಿಗಾಗಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ನಡುವೆ ವಿಭಜನೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
TMC ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, “ನಾವು ಗೋವಾ ಮತ್ತು ಗೋವನ್ನರಿಗೆ ಉಜ್ವಲ ದಿನಗಳನ್ನು ತರುತ್ತೇವೆ ಎಂಬ ಭರವಸೆಯೊಂದಿಗೆ ಟಿಎಂಸಿಗೆ ಸೇರಿದ್ದೇವೆ. ಆದರೆ ಟಿಎಂಸಿ ಗೋವಾ ಮತ್ತು ಗೋವನ್ನರನ್ನು ಅರ್ಥಮಾಡಿಕೊಂಡಿಲ್ಲ ಎಂಬುವುದು ದುರದೃಷ್ಟಕರ” ಎಂದು ಮಮಲ್ದಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾವೂ ಮಮಲ್ದರ್ ಅವರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಿದ್ದರು. 2022 ರ ಆರಂಭದಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ.