‘ಕೈ’ಗೆ ಕೈಕೊಟ್ಟು ಕಮಲದತ್ತ ವಾಲಿದ ಮಾಜಿ ಕಾಂಗ್ರೆಸ್ ಸಂಸದ !

Prasthutha|

ಬೆಂಗಳೂರಿನಲ್ಲಿ  ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಇಂದು ಕಾಂಗ್ರೆಸಿಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ವಿರೂಪಾಕ್ಷ ಅವರು ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ ಕಟೀಲ್‌, ಕೆಎಸ್ ಈಶ್ವರಪ್ಪ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement -

ಎಸ್‌ಟಿ ಹೋರಾಟದ ಸಮಾವೇಶಗಳಲ್ಲಿ ಬಹಿರಂಗವಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೂಪಾಕ್ಷ  ನಿಂದಿಸಿದ್ದರು ಮತ್ತು ಕಾಂಗ್ರೆಸ್‌ ಬಿಡುವ ಮುನ್ಸೂಚನೆಯನ್ನೂ ನೀಡಿದ್ದರು. ಈಗ ಬಿಜೆಪಿ ಸೇರುವ ಮೂಲಕ ಸಾರ್ವಜನಿಕರ ಅನುಮಾನಗಳಿಗೆ ತಿಲಾಂಜಲಿ ಹಾಡಿದ್ದಾರೆ.

- Advertisement -