ಕಾಬೂಲ್: ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ರಾಜಧಾನಿ ಕಾಬೂಲ್ ನ್ನು ತೊರೆದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಾರ್ ಗಳಲ್ಲಿ ಕೂಡ ಹಣ ತುಂಬಲಾಗಿತ್ತು. ಮತ್ತೊಂದಷ್ಟು ಹಣವನ್ನು ಅವರು ಹೆಲಿಕಾಪ್ಟರ್ ನಲ್ಲಿ ಕೂಡ ತುಂಬಿದ್ದರು. ಆದರೂ ಸಂಪೂರ್ಣ ಹಣ ತುಂಬಿಸಿಕೊಳ್ಳಲು ಆಗಲಿಲ್ಲ, ಒಂದಷ್ಟು ಮಿಕ್ಕ ಹಣ ಅಲ್ಲೇ ಉಳಿಸಿ ಹೋಗಿದ್ದಾರೆ ಎಂದು ಕಾಬೂಲ್ ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರ ನಿಕಿತ ಇಚೆಂಕೊ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸದ್ಯ ಎಲ್ಲಿದ್ದಾರೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ. ಅಫ್ಘಾನಿಸ್ತಾನ ಬಿಟ್ಟು ತೆರಳುವ ಮುನ್ನ ಸುದೀರ್ಘ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಅಶ್ರಫ್ ಘನಿ, ತಾನು ಆಗಬಹುದಾದ ರಕ್ತಪಾತವನ್ನು ತಡೆಯುವುದಕ್ಕಾಗಿ ದೇಶ ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದರು.