Home ಕರಾವಳಿ ಫಾರಂ ಫಾರ್ ಎಜುಕೇಶನ್ ಹಳೆಯಂಗಡಿ, ಲೋಗೋ ಅನಾವರಣ

ಫಾರಂ ಫಾರ್ ಎಜುಕೇಶನ್ ಹಳೆಯಂಗಡಿ, ಲೋಗೋ ಅನಾವರಣ

ಫಾರಂ ಫಾರ್ ಎಜುಕೇಶನ್, ಹಳೆಯಂಗಡಿ ಇದರ ಲೋಗೋ ಅನಾವರಣ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಹಳೆಯಂಗಡಿಯ ಹೆಬ್ರಾನ್ ಅಸೆಂಬ್ಲಿ ಚರ್ಚ್ ವಠಾರದಲ್ಲಿ ನವೆಂಬರ್ 10ರಂದು ನಡೆಯಿತು.

ಫಾರಂ ಫಾರ್ ಎಜುಕೇಶನ್, ಹಳೆಯಂಗಡಿ ಇದರ ಕಾರ್ಯದರ್ಶಿ ಝಿಯಾವುಲ್ ಹಖ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಪರಿಚಯ ಮಾಡಿದರು. ಫಾರಂನ ಲೆಕ್ಕ ಪರಿಶೋಧಕ ಕಲಂದರ್ ಕೌಶಿಕ್, ‘ನಾಗರಿಕ ಸೇವೆಯಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ’ ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಿದರು. ಸಂಸ್ಥೆಯ ಚೇಯರ್ ಮೆನ್ ಅನ್ವರ್ ಹುಸೈನ್ ತೈತೋಟ ಫಾರಂನ ವಾರ್ಷಿಕ ಯೋಜನೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಬೊಳ್ಳೂರು ಇದರ ಕಾರ್ಯದರ್ಶಿ ಸುಲೈಮಾನ್ ಕೊಪ್ಪಲ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಇಂದಿರಾನಗರ, ಹೊಸಂಗಡಿ-ಕದಿಕೆ ಜುಮಾ ಮಸ್ಜಿದ್ ಉಪಾಧ್ಯಕ್ಷ ಬಶೀರ್ ಕಲ್ಲಾಪು, ಬದ್ರಿಯಾ ಜುಮಾ‌ ಮಸ್ಜಿದ್ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಅಲ್ ಮದ್ರಸ ಉಪಸ್ಥಿತರಿದ್ದರು.

Join Whatsapp
Exit mobile version