ಬೆಂಗಳೂರು: ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಕೊಲೆ ಶಂಕೆ

Prasthutha|

ಬೆಂಗಳೂರು: ಉಜ್ಬೇಕಿಸ್ತಾನ ಮೂಲದ ವಿದೇಶಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಜರೀನಾ ಮೃತ ಮಹಿಳೆ.


ನಾಲ್ಕು ದಿನದ ಹಿಂದೆ ನಗರಕ್ಕೆ ಬಂದಿದ್ದ ವಿದೇಶಿ ಮಹಿಳೆ ಬಿಡಿಎ ಸೇತುವೆ ಬಳಿಯ ಖಾಸಗಿ ಸ್ಟಾರ್ ಹೋಟೆಲ್ ನ ಸೆಕೆಂಡ್ ಪ್ಲೋರ್ ನ ಕೊಠಡಿಯೊಂದರಲ್ಲಿ ಮೃತಪಟ್ಟಿದ್ದಾರೆ. ಮೃತ ಜರೀನಾ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಆಗಮಿಸಿದ್ದರು. ನಿನ್ನೆ ಸಂಜೆ ಹೋಟೆಲ್ ಸಿಬ್ಬಂದಿ ಎಷ್ಟೇ ಕೂಗಿದ್ರು ಮಹಿಳೆ ಬಂದಿರಲಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿ ಮಾಸ್ಟರ್ ಕೀ ಮೂಲಕ ಬಾಗಿಲು ತೆಗೆದಾಗ ಮಹಿಳೆ ಶವಪತ್ತೆಯಾಗಿದೆ.



Join Whatsapp