Home ಟಾಪ್ ಸುದ್ದಿಗಳು ದಲಿತ ಬಾಲಕರಿಗೆ ತಮ್ಮ ಮಲವನ್ನು ತಾವೇ ಹೊತ್ತೊಯ್ಯುವಂತೆ ಬಲವಂತ ಪಡಿಸಿದ ಜಾತಿವಾದಿ ಭಯೋತ್ಪಾದಕರು | ಮೂವರ...

ದಲಿತ ಬಾಲಕರಿಗೆ ತಮ್ಮ ಮಲವನ್ನು ತಾವೇ ಹೊತ್ತೊಯ್ಯುವಂತೆ ಬಲವಂತ ಪಡಿಸಿದ ಜಾತಿವಾದಿ ಭಯೋತ್ಪಾದಕರು | ಮೂವರ ಬಂಧನ

ಚೆನ್ನೈ : ತಮಿಳುನಾಡಿನ ಗ್ರಾಮವೊಂದರಲ್ಲಿ ಐವರು ದಲಿತ ಬಾಲಕರನ್ನು ತಮ್ಮ ಮಲವನ್ನು ತಾವೇ ಹೊತ್ತೊಯ್ಯುವಂತೆ ಬಲವಂತ ಪಡಿಸಿದ ಮೂವರು ಜಾತಿವಾದಿ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಪೆರಂಬಲೂರು ಜಿಲ್ಲೆಯ ಸಿರುಕುಡಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

10-15ರ ಹರೆಯದ ಐವರು ಬಾಲಕರು ಬಯಲಿನಲ್ಲಿ ಶೌಚ ಮಾಡಲು ತೆರಳಿದ್ದರು. ಅವರನ್ನು ನೋಡಿದ ಮೂವರು ಜಾತಿವಾದಿ ಭಯೋತ್ಪಾದಕರು, ಬಾಲಕರಲ್ಲಿ ತಾವು ಮಾಡಿದ ಶೌಚವನ್ನು ತಾವೇ ತೆಗೆದು, ಗೋಣಿಚೀಲಗಳಲ್ಲಿ ತುಂಬಿಕೊಂಡು ಹೋಗುವಂತೆ ಬಲವಂತ ಪಡಿಸಿದ್ದಾರೆ.

ಘಟನೆಯಿಂದ ಆಕ್ರೋಶಿತರಾದ ಗ್ರಾಮದ ದಲಿತರು ಪ್ರತಿಭಟನೆಗಿಳಿದಿದ್ದು, ರಸ್ತೆ ತಡೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆಯಲು ದಲಿತರು ಸಮ್ಮತಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಭಿನೇಶ್ (20), ಸೆಲ್ವಕುಮಾರ್ (24) ಮತ್ತು ಸಿಲಂಬರಸನ್ (22) ಎಂಬ ಮೂವರು ಯುವಕರನ್ನು ಬಂಧಿಸಲಾಗಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ಫೋಟೊ ಕೃಪೆ : ದ ನ್ಯೂಸ್ ಮಿನಿಟ್ ಡಾಟ್ ಕಾಂ   

Join Whatsapp
Exit mobile version