Home ಕರಾವಳಿ ಬೀದಿ ಬದಿ ವ್ಯಾಪಾರಸ್ಥರ ಬಲವಂತದ ತೆರವು ಕಾರ್ಯಾಚರಣೆ; ವ್ಯಾಪಾರಸ್ಥರನ್ನು ಭೇಟಿಯಾದ ಎಸ್ ಡಿಟಿಯು ನಿಯೋಗ

ಬೀದಿ ಬದಿ ವ್ಯಾಪಾರಸ್ಥರ ಬಲವಂತದ ತೆರವು ಕಾರ್ಯಾಚರಣೆ; ವ್ಯಾಪಾರಸ್ಥರನ್ನು ಭೇಟಿಯಾದ ಎಸ್ ಡಿಟಿಯು ನಿಯೋಗ

ಮಂಗಳೂರು: ವಾರದಲ್ಲಿ ಎರಡು ದಿವಸ ಸುರತ್ಕಲ್ ನಲ್ಲಿ ಸಂತೆ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಬಲವಂತದಿಂದ ಬುಧವಾರ ತೆರವುಗೊಳಿಸಿರುವುದು ಖಂಡನೀಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ ಡಿಟಿಯು) ಎಸ್ ಡಿಟಿಯು ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಕಾವೂರು ತಿಳಿಸಿದ್ದಾರೆ.


ಕೋವಿಡ್ ಕಾರಣದಿಂದ ವ್ಯಾಪಾರ ನಡೆಸಲು ಸಾಧ್ಯವಾಗದೆ ಸಂಕಷ್ಟದ ದಿನಗಳನ್ನು ಕಳೆದ ಬಡ ಮಧ್ಯಮ ವರ್ಗಕ್ಕೆ ಬದುಕು ಸಾಗಿಸಲು ನೆರವಾಗಬೇಕಾದ ಸರಕಾರ, ಜಿಲ್ಲಾಡಳಿತ ಮತ್ತು ಪಾಲಿಕೆ, ಬೀದಿ ಬದಿ ವ್ಯಾಪಾರಸ್ಥರನ್ನು ಬಲಪ್ರಯೋಗದಿಂದ ಏಕಾಏಕಿ ತೆರವುಗೊಳಿಸುತ್ತಿರುವುದು ಸರಿಯಲ್ಲ. ಪಾಲಿಕೆ ಬೀದಿ ಬದಿ (ಸಂತೆ) ವ್ಯಾಪಾರಸ್ಥರ ಜೊತೆ ಚರ್ಚಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರ ಜೀವನ ನಿರ್ವಹಣೆಗೆ ಸಹಕಾರಿಯಾಗಬೇಕು. ಈ ಬಗ್ಗೆ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಬೀದಿ ಬದಿ ವ್ಯಾಪಾರಸ್ಥರ ನೆರವಿಗೆ ಧಾವಿಸಬೇಕು ಎಂದು ಹನೀಫ್ ಕಾವೂರು ಆಗ್ರಹಿಸಿದ್ದಾರೆ.


ನಿಯೋಗದಲ್ಲಿ ಎಸ್ ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಕಾರ್ಯದರ್ಶಿ ಇರ್ಫಾನ್ ಸುರತ್ಕಲ್, ಇಲ್ಯಾಸ್ ಬೆಂಗರೆ, ಸಿದ್ದೀಕ್ ಕಣ್ಣಂಗಾರ್ ಮತ್ತಿತರರು ಇದ್ದರು.

Join Whatsapp
Exit mobile version