Home ಟಾಪ್ ಸುದ್ದಿಗಳು ಹೈದರಾಬಾದ್ । ಮೊದಲ ಬಾರಿಗೆ RSS ಅಂಗಸಂಸ್ಥೆ MRM ಪೂರ್ತಿ ತಿಂಗಳು ರಂಝಾನ್ ಆಚರಣೆಗೆ ಸಜ್ಜು

ಹೈದರಾಬಾದ್ । ಮೊದಲ ಬಾರಿಗೆ RSS ಅಂಗಸಂಸ್ಥೆ MRM ಪೂರ್ತಿ ತಿಂಗಳು ರಂಝಾನ್ ಆಚರಣೆಗೆ ಸಜ್ಜು

ಹೈದರಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಂಗಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಇದೇ ಮೊದಲ ಬಾರಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಪೂರ್ತಿ ತಿಂಗಳು ರಂಝಾನ್ ಆಚರಿಸಲು ಸಜ್ಜಾಗಿದೆ.

ಈ ಹಿಂದೆ ಮುಸ್ಲಿಮ್ ರಾಷ್ಟ್ರೀಯ ಮಂಚ್ ಇಫ್ತಾರ್ ಕೂಟವನ್ನು ಏರ್ಪಡಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪೂರ್ತಿ ತಿಂಗಳ ರಂಝಾನ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

MRM ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡರಲ್ಲೂ ಮೊದಲ 20 ದಿನಗಳವರೆಗೆ ಇಫ್ತಾರ್ ಆಯೋಜಿಸಲು ಯೋಜಿಸುತ್ತಿದ್ದು, ಕೊನೆಯ 10 ದಿನಗಳಲ್ಲಿ ಈದ್ ಮಿಲಾಪ್ ಕಾರ್ಯಕ್ರಮವನ್ನು ಆಚರಿಸಲಿದೆ.

ಈ ಮಧ್ಯೆ ಹಿರಿಯ ಆರೆಸ್ಸೆಸ್ ಮುಖಂಡ, MRM ಮೇಲ್ವಿಚಾರಕ ಇಂದ್ರೇಶ್ ಕುಮಾರ್, ಹೈದರಾಬಾದ್ ಮತ್ತು ವಿಜಯವಾಡವನ್ನು ಕೇಂದ್ರೀಕರಿಸಿ ಮೇಲುಸ್ತುವಾರಿ ವಹಿಸುವಂತೆ MRM ಶಾಖೆಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಆರೆಸ್ಸೆಸ್ ನಾಯಕ, ಹೈದರಾಬಾದ್‌ನ ಏಳನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ಚೀನಾ ಮತ್ತು ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಭಾರತ ಸರ್ಕಾರಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದಕ್ಕಾಗಿ ಪ್ರಶಂಸಿಸಿದ್ದರು.

ಒಯು ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದೊರೆಗಳ 136ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಆರೆಸ್ಸೆಸ್ ಮುಖಂಡ, ನಿಜಾಮರು ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದು, ದೊರೆಗಳು ಪುರುಷರಿಗಾಗಿ ಮಾತ್ರವಲ್ಲದೆ ಮಹಿಳೆಯರಿಗಾಗಿಯೂ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದ್ದರು.

Join Whatsapp
Exit mobile version