Home ಟಾಪ್ ಸುದ್ದಿಗಳು ಸಾಲ ವಾಪಸ್ ನೀಡದಕ್ಕೆ, ಸ್ಕೂಟರ್ ಹಿಂದೆ ಕಟ್ಟಿ ಎಳೆದೊಯ್ದ ದುರುಳರು

ಸಾಲ ವಾಪಸ್ ನೀಡದಕ್ಕೆ, ಸ್ಕೂಟರ್ ಹಿಂದೆ ಕಟ್ಟಿ ಎಳೆದೊಯ್ದ ದುರುಳರು

ಒಡಿಶಾ: ಸಾಲ ವಾಪಸ್ ಕೊಡದಕ್ಕೆ ವ್ಯಕ್ತಿಯೊಬ್ಬನನ್ನು ಸ್ಕೂಟರ್ ಹಿಂದೆ ಕಟ್ಟಿ ಎಳೆದೊಯ್ದ ಅಮಾನವೀಯ ಘಟನೆ ಒಡಿಶಾದ ಕಟಕ್ ರಸ್ತೆಯಲ್ಲಿ ನಡೆದಿದೆ.


22 ವರ್ಷದ ಜಗನ್ನಾಥ ಬೆಹೆರಾ ಎಂಬ ಯುವಕನ ಕೈಯನ್ನು ಹಗ್ಗದ ಒಂದು ತುದಿಗೆ ಕಟ್ಟಿ ಮತ್ತೊಂದು ತುದಿಯನ್ನು ಬೈಕ್ ಗೆ ಕಟ್ಟಿ ಬೈಕ್ ಓಡಿಸಿ ಅಮಾನವೀಯವಾಗಿ ಹಿಂಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಗನ್ನಾಥ ಬೆಹೆರಾ ತನ್ನ ಅಜ್ಜನ ಅಂತಿಮ ವಿಧಿವಿಧಾನವನ್ನು ನಡೆಸಲು ಆರೋಪಿಗಳಿಂದ 1500 ರೂ. ಪಡೆದುಕೊಂಡು ಅದನ್ನು 30 ದಿನಗಳ ಒಳಗೆ ವಾಪಸ್ ನೀಡುತ್ತೇನೆ ಎಂದು ಹೇಳಿದ್ದ. 30 ದಿನ ಕಳೆದರೂ ಜಗನ್ನಾಥ ಬೆಹೆರಾ ಹಣ ವಾಪಸ್ ನೀಡಿರಲಿಲ್ಲ. ಆ ಕಾರಣಕ್ಕಾಗಿ ಆರೋಪಿಗಳು ಜಗನ್ನಾಥ ಬೆಹೆರಾನನ್ನು ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version