Home ಟಾಪ್ ಸುದ್ದಿಗಳು ನಾನವನಲ್ಲ ಎಂದ ಫುಟ್ಬಾಲ್ ಆಟಗಾರ ಅಮರೀಂದರ್ ಸಿಂಗ್ !

ನಾನವನಲ್ಲ ಎಂದ ಫುಟ್ಬಾಲ್ ಆಟಗಾರ ಅಮರೀಂದರ್ ಸಿಂಗ್ !

►ಮಾಜಿ ಮುಖ್ಯಮಂತ್ರಿಯ ಬದಲು ಫುಟ್ಬಾಲ್ ಆಟಗಾರನಿಗೆ ಟ್ಯಾಗ್ ಮಾಡಿದ್ದ ಪತ್ರಕರ್ತರು

ನವದೆಹಲಿ: ಪಂಜಾಬ್ ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಇಡೀ ದೇಶದ ಗಮನ ಸೆಳೆದಿದೆ. ರಾಜಕೀಯದ ಬಗ್ಗೆ ಗಮನಹರಿಸದೆ ಫುಟ್ಬಾಲ್ ಆಟದಲ್ಲಿ ಮಗ್ನರಾಗಿರುವ ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಅಮರೀಂದರ್ ಸಿಂಗ್ ಅವರನ್ನೂ ಈ ರಾಜಕೀಯ ಬಿಟ್ಟಿಲ್ಲ.


“ನಾನು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಲ್ಲ, ನಾನು ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಅಮರೀಂದರ್ ಸಿಂಗ್, ದಯವಿಟ್ಟು ಪತ್ರಕರ್ತರೇ ನನಗೆ ಟ್ಯಾಗ್ ಮಾಡುವುದನ್ನು ನಿಲ್ಲಿಸಿ” ಎಂದು ಫುಟ್ಬಾಲ್ ಆಟಗಾರ ಅಮರೀಂದರ್ ಸಿಂಗ್ ಅಲವತ್ತುಕೊಂಡಿದ್ದಾರೆ.


ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಪತ್ರಕರ್ತರು ಸೇರಿದಂತೆ ನೂರಾರು ಮಂದಿ ಮಾಜಿ ಮುಖ್ಯಮಂತ್ರಿಯ ಬದಲು ಫುಟ್ಬಾಲ್ ಆಟಗಾರನ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಬ್ಬರ ಹೆಸರು ಅಮರೀಂದರ್ ಸಿಂಗ್ ಆಗಿರುವುದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವಾಗಿದೆ.

Join Whatsapp
Exit mobile version