Home ಟಾಪ್ ಸುದ್ದಿಗಳು ಅವಿವೇಕಿಗಳು ವಿವೇಕಾನಂದರ ನಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ: ಎಚ್. ವಿಶ್ವನಾಥ್

ಅವಿವೇಕಿಗಳು ವಿವೇಕಾನಂದರ ನಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ: ಎಚ್. ವಿಶ್ವನಾಥ್

ಮೈಸೂರು: ಅವಿವೇಕಿಗಳು ಸಮಾಜ ಸುಧಾರಕ ವಿವೇಕಾನಂದರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತಿಹಾಸವನ್ನು ತಿರುಚುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ವಿವೇಕಾನಂದರ ಕೊಠಡಿಗಳಿಗೆ ಪಕ್ಷವೊಂದರ ಬಣ್ಣ ಹಚ್ಚುವುದರಿಂದ ಅಲ್ಲಿನವರಿಗೆ ಏನು ಲಾಭ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್, ರಾಜ್ಯದಲ್ಲಿ 9 ಹೊಸ ಯುನಿವರ್ಸಿಟಿಗಳನ್ನು ಸ್ಥಾಪಿಸಲಾಗುತ್ತಿದೆ. ಕುಲಪತಿಯನ್ನುನೇಮಿಸಲು 5 ಕೋಟಿ ರೂ. ಲಂಚ ನೀಡಬೇಕಾಗಿದೆ. ಅಲ್ಲದೆ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣವನ್ನು ಹರಣಗೊಳಿಸಲಾಗುತ್ತಿದೆ ಎಂದು ದೂರಿದ ಅವರು, ನೇಮಕಾತಿ ಮತ್ತು ಕಟ್ಟಡಗಳನ್ನು ನಿರ್ಮಿಸುವ ಅಧಿಕಾರವನ್ನು ಕುಲಪತಿಗೆ ವಹಿಸಬಾರದು. ಈ ಮೂಲಕ ಭ್ರಷ್ಟ ಕುಲಪತಿಗಳ ನೇಮಕಾತಿಯನ್ನು ತಡೆಯಬಹುದು ಎಂದು ತಿಳಿಸಿದರು.

ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ಬಳಿಯಲ್ಲಿ ಇರಿಸುವುದು ಶುದ್ಧ ಅಸಂಬದ್ಧ. ಇದು ಆ ಖಾತೆಯನ್ನು ಕೊಲ್ಲುವುದಕ್ಕೆ ಸಮಾನ. ಈ ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬೊಮ್ಮಾಯಿ ಅವರು 8-10 ಅವರು ಖಾತೆಗಳನ್ನು ತಮ್ಮ ಬಳಿ ಇರಿಸಿದ್ದಾರೆ. ಹಣಕಾಸು ಖಾತೆಯನ್ನು ನಿಭಾಯಿಸಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆಂಧ್ರ, ತಮಿಳುನಾಡು ಸರ್ಕಾರ ಹಣಕಾಸು ಖಾತೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿದೆ ಎಂದು ತಿಳಿಸಿದರು.

Join Whatsapp
Exit mobile version