Home ಟಾಪ್ ಸುದ್ದಿಗಳು ಮಧ್ಯಪ್ರಾಚ್ಯದಲ್ಲಿ ಆಹಾರದ ಕೊರತೆ; ಬಡ ರಾಷ್ಟ್ರಗಳ ಸ್ಥಿತಿ ಶೋಚನೀಯ

ಮಧ್ಯಪ್ರಾಚ್ಯದಲ್ಲಿ ಆಹಾರದ ಕೊರತೆ; ಬಡ ರಾಷ್ಟ್ರಗಳ ಸ್ಥಿತಿ ಶೋಚನೀಯ

ಕೀವ್‌: ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಜಗತ್ತಿನ ಹಲವು ಬಡ ರಾಷ್ಟ್ರಗಳಲ್ಲಿ ಆಹಾರದ ಕೊರತೆ ಉಂಟಾಗಿದ್ದು, ಜನ ಪರದಾಡುವಂತಾಗಿದೆ. ಇರಾಕ್‌, ಸಿರಿಯಾ, ಸುಡಾನ್‌, ಲೆಬನಾನ್‌, ಯೆಮೆನ್‌ನಂತಹ ಬಡರಾಷ್ಟ್ರಗಳ ಪರಿಸ್ಥಿತಿ ದಯನೀಯವಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಗೋಧಿ, ಬಾರ್ಲಿಯನ್ನು ರಫ್ತು ಮಾಡುವ ದೇಶಗಳೆಂದರೆ ರಷ್ಯಾ ಮತ್ತು ಉಕ್ರೇನ್‌. ಜೊತೆಗೆ ಸೂರ್ಯಕಾಂತಿ ಎಣ್ಣೆ, ಇತರೆ ಆಹಾರಧಾನ್ಯ ಗಳೂ ಆ ದೇಶಗಳಿಂದಲೇ ಪೂರೈಕೆಯಾಗುತ್ತವೆ. ಈಗ ಯುದ್ಧದಿಂದಾಗಿ ಇವುಗಳ ಸರಬರಾಜು ಸ್ಥಗಿತಗೊಂಡಿವೆ.

ಯುದ್ಧಪೂರ್ವದಲ್ಲೇ ತೀವ್ರ ಆರ್ಥಿಕ ಕುಸಿತ ಎದುರಿಸುತ್ತಿರುವ ಪಶ್ಚಿಮ ಏಷ್ಯಾ ದೇಶ ಲೆಬನಾನ್‌ನಲ್ಲಿ ಇದೀಗ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ದಿನನಿತ್ಯದ ಆಹಾರಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕನಿಷ್ಠ ಬ್ರೆಡ್‌ಗಳಾದರೂ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಧೈರ್ಯ ವಾಗಿದ್ದ  ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳೆಯರು  ಅಸಹಾಯಕರಾಗಿದ್ದಾರೆ.

Join Whatsapp
Exit mobile version