Home ಕರಾವಳಿ ಸುರತ್ಕಲ್ ಫಾಝಿಲ್ ಹತ್ಯೆ | ಊಟ ಚೆನ್ನಾಗಿಲ್ಲ, ಹಳಸಿದೆ: ಪೊಲೀಸರ ಮಧ್ಯೆಯೇ ಮಾತಿನ ಚಕಮಕಿ

ಸುರತ್ಕಲ್ ಫಾಝಿಲ್ ಹತ್ಯೆ | ಊಟ ಚೆನ್ನಾಗಿಲ್ಲ, ಹಳಸಿದೆ: ಪೊಲೀಸರ ಮಧ್ಯೆಯೇ ಮಾತಿನ ಚಕಮಕಿ

ಮಂಗಳೂರು: ಫಾಝಿಲ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೊರ ರಾಜ್ಯದ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.


ಹೊರ ರಾಜ್ಯದ ಪೊಲೀಸರು ಊಟದ ವಿಚಾರದಲ್ಲಿ ಸುರತ್ಕಲ್ ಪೊಲೀಸ್ ರ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ಈ ಘಟನೆ ನಡೆದಿದೆ.


ಚಿಕ್ಕಮಗಳೂರು, ಉಡುಪಿ ಪೊಲೀಸರನ್ನು ಕೆಎಸ್ ಆರ್ ಪಿ ಜೊತೆಗೆ ಹೆಚ್ಚುವರಿಯಾಗಿ ಭದ್ರತಗೆ ನಿಯೋಜಿಸಲಾಗಿದೆ. ಊಟ ತಂದುಕೊಟ್ಟಿದ್ದ ಸುರತ್ಕಲ್ ಪೊಲೀಸ್ ಸಿಬ್ಬಂದಿಗೆ ಚಿಕ್ಕಮಗಳೂರು ಪೊಲೀಸರು ಬೈದಿದ್ದು, ಊಟ ಚೆನ್ನಾಗಿಲ್ಲ, ಹಳಸಿದೆ ಎಂದು ಹೇಳಿ ನಿಂದಿಸಿದ್ದಾರೆ. ಇದರಿಂದ ಎರಡೂ ಕಡೆಯ ಪೊಲೀಸರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp
Exit mobile version