Home ಟಾಪ್ ಸುದ್ದಿಗಳು ಆಹಾರ ಬಿಕ್ಕಟ್ಟು ಹಿನ್ನೆಲೆ: 2025ರವರೆಗೂ ಕಡಿಮೆ ಆಹಾರ ತಿನ್ನಿ ಎಂದ ಉತ್ತರ ಕೊರಿಯಾ ಅಧ್ಯಕ್ಷ

ಆಹಾರ ಬಿಕ್ಕಟ್ಟು ಹಿನ್ನೆಲೆ: 2025ರವರೆಗೂ ಕಡಿಮೆ ಆಹಾರ ತಿನ್ನಿ ಎಂದ ಉತ್ತರ ಕೊರಿಯಾ ಅಧ್ಯಕ್ಷ

ಉತ್ತರ ಕೊರಿಯಾ : ದೇಶದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದ ಹಿನ್ನೆಲೆಯಲ್ಲಿ ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿದ್ದಾರೆ.


ಉತ್ತರ ಕೊರಿಯಾದ ಜನರಿಗೆ ಈಗಾಗಲೇ ಆಹಾರ ಕೊರತೆ ಎದುರಾಗಿದೆ. ಅದೇ ರೀತಿ ಇನ್ನೂ ಮೂರು ವರ್ಷಗಳ ಕಾಲ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಅವರು ಹೇಳಿದ್ದಾರೆ.


ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಕೊರಿಯಾ 2020ರ ಜನವರಿಯಲ್ಲಿ ಚೀನಾ ಜತೆಗೆ ಹೊಂದಿಕೊಂಡಿದ್ದ ಗಡಿಯನ್ನು ಮುಚ್ಚಿತ್ತು. ಆದರೆ ಉತ್ತರ ಕೊರಿಯಾದ ಈ ನಿರ್ಧಾರದಿಂದಾಗಿ ದೇಶದ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲ, ದೇಶದಲ್ಲಿ ಪ್ರತಿದಿನ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ.


ಕೋವಿಡ್ ನಿಂದ ತತ್ತರಿಸಿರುವ ಕೊರಿಯಾಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Join Whatsapp
Exit mobile version