Home ಗಲ್ಫ್ ಯುಎಇ ಬೆನ್ನಲ್ಲೇ ಕುವೈತ್‌ನಲ್ಲೂ ವಾರದ ರಜೆಯಲ್ಲಿ ಬದಲಾವಣೆ?

ಯುಎಇ ಬೆನ್ನಲ್ಲೇ ಕುವೈತ್‌ನಲ್ಲೂ ವಾರದ ರಜೆಯಲ್ಲಿ ಬದಲಾವಣೆ?

ಕುವೈತ್ ಸಿಟಿ: ಯುಎಇ ನಂತರ ಕುವೈತ್ ಕೂಡ ವಾರದ ರಜೆ ಬದಲಾವಣೆಗೆ ಚಿಂತನೆ ನಡೆಸಿದೆ.

ಶನಿವಾರ ಮತ್ತು ಭಾನುವಾರ ವಾರಾಂತ್ಯ ರಜಾ ದಿನವನ್ನಾಗಿ ಮಾಡಿ ಶುಕ್ರವಾರ ಮಧ್ಯಾಹ್ನದ ತನಕ ಕೆಲಸದ ಅವಧಿಯನ್ನು ವಿಸ್ತರಿಸಲು ಕುವೈತ್ ತೀರ್ಮಾನಿಸಿದೆ.

ಕುವೈತ್ ಆಡಳಿತ ನಡೆಸಿದ ಈ ಕುರಿತ ಸಮೀಕ್ಷೆಯಲ್ಲಿ ಬಹುತೇಕ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಶುಕ್ರವಾರ ಜುಮಾ ಪ್ರಾರ್ಥನೆ ಮತ್ತು ಕುರ್‌ಆನ್ ಪಠಣಕ್ಕಾಗಿ ಇರುವ ದಿನವಾಗಿದೆ. ರಾಷ್ಟ್ರದ ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾದ ಶುಕ್ರವಾರದ ರಜಾ ದಿನವನ್ನು ಬದಲಾಯಿಸಬಾರದೆಂದು ಒಂದು ವಿಭಾಗ ಒತ್ತಾಯಿಸಿದೆ.

ಇನ್ನು ಕೆಲವರು ಹಿಂದಿನಂತೆ ಶನಿವಾರದ ಬದಲು ಗುರುವಾರ ಮತ್ತು ಶುಕ್ರವಾರ ರಜೆ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನವರಿಯಿಂದ ಜಾರಿಗೆ ಬರುವಂತೆ ಶನಿವಾರ ಮತ್ತು ಭಾನುವಾರ ವಾರದ ರಜಾ ದಿನವಾಗಿ ಯುಎಇ ಇತ್ತೀಚೆಗೆ ಘೋಷಿಸಿತ್ತು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version