Home ಟಾಪ್ ಸುದ್ದಿಗಳು ಧರ್ಮ ಸಂಸತ್ ನಲ್ಲಿ ನರಮೇಧಕ್ಕೆ ಕರೆ । ಮುಸ್ಲಿಮರ ವಿರುದ್ಧ ಸಶಸ್ತ್ರ ಕಾರ್ಯಾಚರಣೆಗೆ ಸಮಿತಿ ರಚಿಸಿದ...

ಧರ್ಮ ಸಂಸತ್ ನಲ್ಲಿ ನರಮೇಧಕ್ಕೆ ಕರೆ । ಮುಸ್ಲಿಮರ ವಿರುದ್ಧ ಸಶಸ್ತ್ರ ಕಾರ್ಯಾಚರಣೆಗೆ ಸಮಿತಿ ರಚಿಸಿದ ಸಂಘಪರಿವಾರ

ನವದೆಹಲಿ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಸಂಘಪರಿವಾರದ ನಾಯಕರು ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಬೆನ್ನಲ್ಲೇ ಇದೀಗ ಮುಸ್ಲಿಮರ ವಿರುದ್ಧ ಸಶಸ್ತ್ರ ಕಾರ್ಯಾಚರಣೆಗಾಗಿ ಸುಮಾರು 21 ಕೋರ್ ಸಮಿತಿಯನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹರಿದ್ವಾರದಲ್ಲಿ 21 ಸ್ವಾಮೀಜಿಗಳು ಮುಸ್ಲಿಮರ ವಿರುದ್ಧ ತಮ್ಮ ಸಶಸ್ತ್ರ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸಮಿತಿಯಲ್ಲಿ ಯತಿ ನರಸಿಂಹಾನಂದ ಗಿರಿ, ಸ್ವಾಮಿ ಪ್ರಬೋಧಾನಂದ ಗಿರಿ, ಸಾಧ್ವಿ ಅನ್ನಪೂರ್ಣ ಅಲಿಯಾಸ್ ಪೂಜಾ ಶಕುನ್ ಪಾಂಡೆ, ಪಂಡಿತ್ ಅಧೀರ್ ಕೌಶಿಕ್, ಸಿಂಧು ಮಹಾರಾಜ್ ಮತ್ತು ಸ್ವಾಮಿ ದರ್ಶನ್ ಭಾರತಿ ಇದ್ದಾರೆ.

ಧರ್ಮ ಸಂಸತ್ ಮಾಡಿದ ದ್ವೇಷ ಭಾಷಣವನ್ನು ಸಮರ್ಥಿಸಿಕೊಂಡ ಹಿಂದುತ್ವ ಪರ ಸನ್ಯಾಸಿಗಳು, ಈಗ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾಯಿಸಲು ದೇಶಾದ್ಯಂತ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಸ್ವಾಮಿ ಆನಂದ್ ಸ್ವರೂಪ್ ತಿಳಿಸಿದರು.

ಮಾತ್ರವಲ್ಲ ಹಿಂದೂ ಮಹಾಸಭಾದ ಕಾರ್ಯದರ್ಶಿ, ನಿರಂಜನಿ ಅಖಾಡದ ಮಹಾಮಂಡಲೇಶ್ವರಿಯಾಗಿರುವ ಸಾಧ್ವಿ ಅನ್ನಪೂರ್ಣ ಭಾರತಿ ಮಾತನಾಡಿ ಗೋಡ್ಸೆ ಮಾರ್ಗವನ್ನು ಅನುಸರಿಸಿ ಸುಮಾರು 20 ಲಕ್ಷ ಮುಸ್ಲಿಮರನ್ನು ಕೊಲ್ಲುವ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.

Join Whatsapp
Exit mobile version