Home ಕರಾವಳಿ ಉಡುಪಿ: ಮಕ್ಕಳ ಶಿಕ್ಷಣದತ್ತ ಗಮನಹರಿಸಿ; ಪೋಷಕರಿಗೆ ಖಾಝಿ ಕರೆ

ಉಡುಪಿ: ಮಕ್ಕಳ ಶಿಕ್ಷಣದತ್ತ ಗಮನಹರಿಸಿ; ಪೋಷಕರಿಗೆ ಖಾಝಿ ಕರೆ

ಉಡುಪಿ: ವಿದ್ಯಾರ್ಥಿನಿಯರ ಹಿಜಾಬ್ ಸಮಸ್ಯೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆಯಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಗಮನಹರಿಸಲಿ. ಯಾವುದೇ ಕಾರಣಕ್ಕೂ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ.

SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ಪದವಿ ಪೂರ್ವ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಗಮನಹರಿಸಬೇಕು. ಸೂಕ್ಷ್ಮ ವಿಷಯಗಳನ್ನು ದೀರ್ಘ ದೃಷ್ಠಿಯಿಂದ ನೋಡಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯ ನಮ್ಮಿಂದ ಆಗಬಾರದು ಎಂದು ತಿಳಿಸಿದ್ದಾರೆ

ಜಾತ್ಯತೀತ ರಾಷ್ಟ್ರವಾದ ಈ ಭಾರತದ ಸಂವಿಧಾನವು ಅವರವರ ಧರ್ಮದ ಆಚರಣೆಗಳನ್ನು ಮಾಡಲು ಅವಕಾಶವನ್ನು ನೀಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವ ತಪ್ಪು ಮಾಹಿತಿಗಳೇ ಇಷ್ಟೊಂದು ಸಮಸ್ಯೆಗಳು ಬಿಗಡಾಯಿಸಲು ಪ್ರಮುಖ ಕಾರಣವೆಂದು ಉಡುಪಿ ಖಾಝಿ ಅವರು ಅಭಿಪ್ರಾಯಪಟ್ಟಿದ್ದಾರೆ.

Join Whatsapp
Exit mobile version