Home ಮಾಹಿತಿ ಬಿಸ್ಕೆಟ್‌, ಎಣ್ಣೆ, ಕಾಫಿ, ಚಾಕ್ಲೆಟ್‌ ದರ ಹೆಚ್ಚಿಸಲು FMCG ಕಂಪನಿಗಳ ಸಿದ್ಧತೆ..!

ಬಿಸ್ಕೆಟ್‌, ಎಣ್ಣೆ, ಕಾಫಿ, ಚಾಕ್ಲೆಟ್‌ ದರ ಹೆಚ್ಚಿಸಲು FMCG ಕಂಪನಿಗಳ ಸಿದ್ಧತೆ..!

ಹೊಸದಿಲ್ಲಿ: ಬಿಸ್ಕೆಟ್‌ ಮೊದಲಾದ ಪೊಟ್ಟಣಗಳಲ್ಲಿ ಸಿಗುವ ಆಹಾರ, ಸೌಂದರ್ಯವರ್ಧಕಗಳು ಸೇರಿದಂತೆ ತ್ವರಿತವಾಗಿ ಗ್ರಾಹಕರ ಕೈ ಸೇರುವ ಉತ್ಪನ್ನಗಳ (ಎಫ್‌ಎಂಸಿಜಿ) ಬೆಲೆ ಸದ್ಯದಲ್ಲಿಯೇ ಏರಿಕೆಯಾಗುವ ಸಾಧ್ಯತೆ ಇದೆ.

ಉತ್ಪಾದನಾ ವೆಚ್ಚ ಏರಿಕೆ, ಹಣದುಬ್ಬರದಿಂದ ಕುಸಿದ ಖರೀದಿಯಿಂದಾಗಿ ಕಂಗಾಲಾಗಿರುವ ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌, ಗೋದ್ರೇಜ್‌ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌, ಐಟಿಸಿ, ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌, ಡಾಬರ್‌ ಇಂಡಿಯಾ, ನೆಸ್ಲೆ, ಬ್ರಿಟಾನಿಯಾ ಸೇರಿದಂತೆ ಹಲವು ಕಂಪನಿಗಳು ಬೆಲೆ ಹೆಚ್ಚಳಕ್ಕೆ ಮುಂದಾಗಿವೆ. ತಾಳೆ ಎಣ್ಣೆ, ಕಾಫಿ ಬೀಜ ಹಾಗೂ ಕೋಕಾ ಮೊದಲಾದ ಕಚ್ಚಾ ಉತ್ಪನ್ನಗಳ ಬೆಲೆ ಗಗನಕ್ಕೇರಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಒತ್ತಾಸೆ ನೀಡಿವೆ.

ಆಹಾರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜನಸಾಮಾನ್ಯರ ದಿನಸಿ ಖರೀದಿಯ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಹಕರು ಕೈ ಬಿಗಿ ಮಾಡುತ್ತಿದ್ದಾರೆ,” ಎಂದು ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌ನ ಮುಖ್ಯಸ್ಥ ಸುನೀಲ್‌ ಡಿಸೋಜ ಹೇಳಿದ್ದಾರೆ.

Join Whatsapp
Exit mobile version