Home ಟಾಪ್ ಸುದ್ದಿಗಳು ಅಳುವ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ವಿಮಾನ ಸಿಬ್ಬಂದಿ: ವೀಡಿಯೋ ವ್ಯಾಪಕ ವೈರಲ್

ಅಳುವ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ವಿಮಾನ ಸಿಬ್ಬಂದಿ: ವೀಡಿಯೋ ವ್ಯಾಪಕ ವೈರಲ್

ಏರ್ ಇಂಡಿಯಾ ಸಿಬ್ಬಂದಿಯೊಬ್ಬರು ಅಳುತ್ತಿರುವ ಮಗುವನ್ನು ಎತ್ತಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ಏರ್ ಇಂಡಿಯಾ ಫ್ಲೈಟ್ ನಲ್ಲಿ ಮಗು ಅಳಲು ಪ್ರಾರಂಭಿಸಿದಾಗ ಸಿಬ್ಬಂದಿಯೊಬ್ಬರು ಬಂದು ಮಗುವನ್ನುಎತ್ತಿಕೊಂಡು ಸಮಧಾನ ಪಡಿಸಿದ್ದಾರೆ. ಅವರು ಎತ್ತಿಕೊಂಡ ತಕ್ಷಣ ಜೋರಾಗಿ ಬೊಬ್ಬೆ ಹಾಕುತ್ತಿದ್ದ ಮಗು ಕೂಡ ಸಮಧಾನವಾಗಿದೆ.

ಮಗು ಅವರ ಹೆಗಲ ಮೇಲೆ ಆರಾಮವಾಗಿ ಮಲಗಿಕೊಂಡಿದೆ, ಈ ಸುಂದರ ವೀಡಿಯೋವನ್ನು ಅದೇ ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp
Exit mobile version