ಇಬ್ಬರು ಮಹಿಳೆಯರು, ಬಾಲಕಿ, ಏಳು ತಿಂಗಳ ಮಗು ಸೇರಿದಂತೆ ಐವರು ಸಜೀವ ದಹನ

Prasthutha|

ಗಾಜಿಯಾಬಾದ್: ಮೂರು ಅಂತಸ್ತಿನ ಮನೆಯಲ್ಲಿ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಇಬ್ಬರು ಮಹಿಳೆಯರು, ಬಾಲಕಿ (ಏಳು ವರ್ಷ) ಮತ್ತು ಏಳು ತಿಂಗಳ ಮಗು ಸೇರಿದಂತೆ ಐದು ಜನರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯ ಬೆಹ್ತಾ ಹಾಜಿಪುರ ಪ್ರದೇಶದಲ್ಲಿ ನಡೆದಿದೆ.

- Advertisement -

ನಝ್ರಾ (26), ಆಕೆಯ ಮಗಳು ಇಕ್ರಾ (7), ಶೈಫುಲ್ ರೆಹಮಾನ್ (35), ಮೊಹಮ್ಮದ್ ಫೈಝ್ (7 ತಿಂಗಳು) ಮತ್ತು ಫರ್ವೀನ್ (28) ಮೃತರು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸೇವೆ ಸ್ಥಳಕ್ಕೆ ಧಾವಿಸಿದೆ. ಆರಂಭದಲ್ಲಿ, ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆ ಮತ್ತು ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಟ್ಟಡದ ನೆಲಮಹಡಿಯಿಂದ ಬೆಂಕಿ ಪ್ರಾರಂಭವಾಯಿತು. ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಸಿಕ್ಕಿಬಿದ್ದವರು ಜೀವಂತ ದಹನವಾಗಿದೆ. ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳು ಸೇರಿದಂತೆ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಪಿ.ತಿಳಿಸಿದ್ದಾರೆ.

Join Whatsapp
Exit mobile version