ಲಕ್ನೋ: ತಾಯಿ ಹೆಂಡತಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಂದಾ ಜಿಲ್ಲೆಯ ಅರಾರಿಯಾದಲ್ಲಿ ನಡೆದಿದೆ.
ಆರೋಪಿ ಮಹೇಶ್ ಎಂಬಾತನನ್ನು ನಾಗಘೇರ್ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈತನ ಮಗಳೊಬ್ಬಳು ಚಿಕ್ಕಮ್ಮನ ಬಳಿಗೆ ಹೋಗಿದ್ದರಿಂದ ಬದುಕುಳಿದ್ದಾಳೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.