ಗುಡ್ಡ ಕುಸಿದು ಮನೆಗೆ ಬಿದ್ದ ಪರಿಣಾಮ ಮೂವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಮೃತ

Prasthutha|

ಗುವಾಹಟಿ: ಅಸ್ಸಾಂನ ಕರೀಮ್‌ಗಂಜ್‌ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿದು ಮನೆಯೊಂದಕ್ಕೆ ಬಿದ್ದ ಪರಿಣಾಮ ಮೂವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

- Advertisement -

ನೆಸ್ಸಾ (55) ಮತ್ತು ಆಕೆಯ ಮಕ್ಕಳಾದ ಸಾಹಿದಾ ಖಾನಂ (18), ಜಾಹಿದಾ ಖಾನಂ (16) ಹಮೀದಾ ಖಾನಂ (11) ಮತ್ತು ಮಹಿಮುದ್ದೀನ್‌ ಎಂಬವರ ಪುತ್ರ ಮೆಹದಿ ಹಸನ್‌ (3) ಮೃತರು.

ಬದರ್‌ಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಕರೀಂಗಂಜ್‌ ಎಸ್‌‍ಪಿ ಪಾರ್ಥ ಪ್ರೋತಿಮ್‌ ದಾಸ್‌‍ ತಿಳಿಸಿದ್ದಾರೆ.

- Advertisement -

ಇಂದು ಮಧ್ಯಾಹ್ನ 12:45 ರ ಸುಮಾರಿಗೆ ಗುಡ್ಡದಲ್ಲಿ ಭೂಕುಸಿತ ಸಂಭವಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲಿ ಮನೆ ಸಂಪೂರ್ಣವಾಗಿ ಸಮಾಧಿಯಾಗಿದೆ. ಬಾದರ್‌ಪುರ ಪೊಲೀಸ್‌‍ ಠಾಣೆಯ ಪ್ರಭಾರಿ ಅಧಿಕಾರಿ, ಸಿಬ್ಬಂದಿ ಮತ್ತು ಎಸ್‌‍ಡಿಆರ್‌ಎಫ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Join Whatsapp