Home ಟಾಪ್ ಸುದ್ದಿಗಳು ಕೊಪ್ಪಳದಲ್ಲಿ ಲಾರಿ- ಕಾರು ಡಿಕ್ಕಿ: ಐವರು ಸ್ಥಳದಲ್ಲೇ ದುರ್ಮರಣ

ಕೊಪ್ಪಳದಲ್ಲಿ ಲಾರಿ- ಕಾರು ಡಿಕ್ಕಿ: ಐವರು ಸ್ಥಳದಲ್ಲೇ ದುರ್ಮರಣ

ಕೊಪ್ಪಳ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಬಳಿ ತಡರಾತ್ರಿ ಸಂಭವಿಸಿದೆ.

ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯವಾಗಿದೆ. ದೇವಪ್ಪ, ಗಿರಿಜಮ್ಮ, ಪಾರವ್ವ, ಶಾಂತವ್ವ, ಗಿರಿಜಮ್ಮ ಮೃತಪಟ್ಟವರು ಮತ್ತು
ಸಿರಿಯಪ್ಪ, ಭೂಮಿಕಾ, ಪುಷ್ಪರಾಜ್, ಪಲ್ಲವಿ ಎಂಬವರಿಗೆ ಗಾಯಗಳಾಗಿವೆ.

ಮೃತರನ್ನು ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದವರು ಎಂದು ಗುರುತಿಸಲಾಗಿದೆ. ನಾಲ್ವರು ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬರ್ತಡೇ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಘಟನೆ ನಡೆದಿದೆ ಎನ್ನಲಾಗಿದೆ.


ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp
Exit mobile version