Home ಟಾಪ್ ಸುದ್ದಿಗಳು ಬಾಲಕ ಅಪಹರಣ ಪ್ರಕರಣ, ನರ್ಸ್ ಸಹಿತ ಐವರ ಬಂಧನ

ಬಾಲಕ ಅಪಹರಣ ಪ್ರಕರಣ, ನರ್ಸ್ ಸಹಿತ ಐವರ ಬಂಧನ

ಮೈಸೂರು: 12 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪುರುಷ ನರ್ಸ್ ಕೂಡಾ ಆಗಿದ್ದಾನೆ. ಮಗುವಿನ ಅಜ್ಜನನ್ನು ನೋಡಿಕೊಳ್ಳಲು ಬಾಲಕನ ಪೋಷಕರು ನೇಮಿಸಿಕೊಂಡಿದ್ದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಚಂದ್ರಗುಪ್ತ,ಬಾಲಕನನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರತ್ಯಕ್ಷದರ್ಶಿಗಳು ಹಾಗೂ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದೆವು. ಬಾಲಕನನ್ನು ಅಪಹರಣಕಾರರಿಂದ ರಕ್ಷಿಸುವುದು ಮೊದಲ ಆದ್ಯತೆಯಾಗಿತ್ತು. ಆದ್ದರಿಂದ ಅಪಹರಣಕಾರರಿಗೆ ಹಣದ ಆಮಿಷವೊಡ್ಡಲಾಯಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಪಹರಣಾಕಾರರು ಕೊಡಗು ಜಿಲ್ಲೆಯ ವಿರಾಜಪೇಟೆಯ ನಿರ್ಜನ ಸ್ಥಳದಲ್ಲಿ ಬಾಲಕನನ್ನು ಬಿಡುಗಡೆ ಮಾಡಿದ್ದಾರೆ. ಬಾಲಕನನ್ನು ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಅಪಹರಣಾಕಾರರಾದ 20-25 ರ ಹರೆಯದ ಯುವಕರ ಗುಂಪನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಾಲಕನನ್ನು ಅಪಹರಣಕಾರರಿಂದ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ರಾತ್ರಿ ಬಾಲಕನನ್ನು ನಿರ್ಜನ ಸ್ಥಳದಲ್ಲಿ ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದರು. ಬಾಲಕನನ್ನು ರಕ್ಷಿಸಿದ ನಂತರ, ಅಪಹರಣಕಾರರ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿಲಾಗಿತ್ತು. ವಿರಾಜಪೇಟೆಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಾಥಮಿಕ ತನಿಖೆ ವೇಳೆ ಯುವಕರು ತಮ್ಮ ಸಾಲ ತೀರಿಸಲು ಸುಲಿಗೆಗಾಗಿ ಅಪರಾಧ ಎಸಗಿದ್ದಾರೆ ಎಂದು ಚಂದ್ರಗುಪ್ತ ಹೇಳಿದರು.

Join Whatsapp
Exit mobile version