ಅಹ್ಮದಾಬಾದ್: ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರಿನಿಂದ ಸೋರಿಕೆಯಾದ ವಿಷಾನಿಲವನ್ನು ಉಸಿರಾಡಿದ ಪರಿಣಾಮ ಕಾರ್ಖಾನೆಯೊಂದರ ಐವರು ಕಾರ್ಮಿಕರು ಮೃತಪಟ್ಟು, 12ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತಿನ ಸೂರತ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಕಾರ್ಮಿಕರು ಕಾರ್ಖಾನೆಯಲ್ಲಿ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ.
“ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಕಾರ್ಖಾನೆಯ ಬಳಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್ ನಿಂದ ವಿಷಕಾರಿ ಹೊಗೆಯನ್ನು ಉಸಿರಾಡಿದ ನಂತರ ಸುಮಾರು 25 ಕಾರ್ಮಿಕರು ಪ್ರಜ್ಞಾಹೀನರಾಗಿ ಬಿದ್ದಿದ್ದರಿಂದ ಕನಿಷ್ಠ ಐವರು ಕಾರ್ಮಿಕರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್ ಎಂಸಿ) ಉಸ್ತುವಾರಿ ಮುಖ್ಯ ಅಗ್ನಿಶಾಮಕ ಕಚೇರಿ ಬಸಂತ್ ಪರರೀಕ್ ತಿಳಿಸಿದ್ದಾರೆ.