ಹುಬ್ಬಳ್ಳಿ: ಹಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಗೈದ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆಯೇ ಫೇಸ್ ಬುಕ್ ಪೋಸ್ಟ್ ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಐದು ದಿನಗಳ ಹಿಂದೆ ಆರೋಪಿ ತನ್ನ ಫೇಸ್ ಬುಕ್ ಖಾತೆಯಲ್ಲಿ, ಭಗವದ್ಗೀತೆಯ ಶ್ಲೋಕವನ್ನು ಪೋಸ್ಟ್ ಮಾಡಿ ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ…’ ಎಂದು ಬರೆದುಕೊಂಡಿದ್ದ.
ಆರೋಪಿಗಳನ್ನು ಹುಬ್ಬಳ್ಳಿ- ಧಾರವಾಡ ಪೊಲೀಸರು ಹತ್ಯೆಯಾದ ನಾಲ್ಕೇ ಗಂಟೆಗಳಲ್ಲಿ ವಶಕ್ಕೆ ಪಡದಿದ್ದರು. ಚಂದ್ರಶೇಖರ್ ಹುಬ್ಬಳ್ಳಿ ಮೂಲದ ಆಪ್ತ ಮಹಾಂತೇಶ್ ಶಿರೋಳ್ ಎಂಬಾತನ ಪತ್ನಿ ವನಜಾಕ್ಷಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿಯಲ್ಲಿರುವ ಅಪಾರ್ಟ್ ಮೆಂಟ್ ಸಹ ಆಕೆಯ ಹೆಸರಿಗೆ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ. ಈ ಸಂಬಂಧವಾಗಿ ಜಗಳ ನಡೆದಿದ್ದು, ಅದೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ.