Home ಟಾಪ್ ಸುದ್ದಿಗಳು ವಿಪಕ್ಷಗಳ ಧರಣಿ ನಡುವೆಯೂ ಐದು ವಿಧೇಯಕಗಳು ಅಂಗೀಕಾರ

ವಿಪಕ್ಷಗಳ ಧರಣಿ ನಡುವೆಯೂ ಐದು ವಿಧೇಯಕಗಳು ಅಂಗೀಕಾರ

ಬೆಳಗಾವಿ: ವಿಧಾನ ಸಭೆಯಲ್ಲಿ ಇಂದು ದೊಡ್ಡ ಗದ್ದಲದ ನಡುವೆಯೇ ಐದು ಮಹತ್ವದ ವಿಧೇಯಕಗಳು ಅಂಗೀಕಾರ ಪಡೆದಿವೆ. ಸಚಿವ ಝಮೀರ್ ಅಹ್ಮದ್ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿದ ಬಿಜೆಪಿ-ಜೆಡಿಎಸ್ ಸದಸ್ಯರು ಝಮೀರ್‌ರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಸದನದ ಬಾವಿಗಿಳಿದು ಧರಣಿ, ಗದ್ದಲ ನಡೆಸುತ್ತಿರುವಾಗಲೇ ಐದು ಮಹತ್ವದ ವಿಧೇಯಕಗಳು ಅಂಗೀಕರಿಸಲ್ಪಟ್ಟಿವೆ.

2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ಎರಡನೇ ತಿದ್ದುಪಡಿ)ವಿಧೇಯಕ, ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ(ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪು(ತಿದ್ದುಪಡಿ)ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ ಹಾಗೂ ಕರಾವಳಿ ಅಭಿವೃದ್ಧಿ ಮಂಡಲಿ ವಿಧೇಯಕ ಇಂದು ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿವೆ.

Join Whatsapp
Exit mobile version