Home ರಾಜ್ಯ ಭಾರತ್ ಬಂದ್ ಗೆ ಎಫ್ ಐ ಟಿ ಯು ಬೆಂಬಲ ಘೋಷಣೆ

ಭಾರತ್ ಬಂದ್ ಗೆ ಎಫ್ ಐ ಟಿ ಯು ಬೆಂಬಲ ಘೋಷಣೆ

ಬೆಂಗಳೂರು: ಇದೇ 27ರಂದು ನಡೆಯಲಿರುವ ಭಾರತ್ ಬಂದ್ ಗೆ ತಮ್ಮ ಬೆಂಬಲವಿದೆ ಎಂದು ಫೆಡರೇಷನ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ ಎಂದು ತಿಳಿಸಿದೆ. ಬೆಂಗಳೂರಿನಲ್ಲಿಂದು ನಡೆದ ರಾಜ್ಯ ಮಟ್ಟದ ಸಂಸ್ಥಾಪನಾ ಸಮಾವೇಶ ಬಳಿಕ ಸುದ್ದಿಗಾರರೊಂದಿಗೆ ರಾಷ್ಟ್ರೀಯ ಉಪಾಧ್ಯಕ್ಷ ನದಾಫ್ ಈ ವಿಷಯ ತಿಳಿಸಿದರು.


ಸಂಘಟನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ. ಇದೇ 27ರಂದು ನಡೆಯಲಿರುವ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ರಾಜ್ಯ ಘಟಕಗಳನ್ನು ಬಲಪಡಿಸುವ ಬಗ್ಗೆ ಎಫ್ ಐಟಿಯು ಘಟಕವನ್ನು ಪ್ರಾರಂಭ ಮಾಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಅಕ್ಟೋಬರ್ 10ಕ್ಕೆ ಕೊಯಮತ್ತೂರುನಲ್ಲಿ ಸಮಾವೇಶ ನಡೆಯಲಿದೆ. ಇದಕ್ಕಾಗಿ ರಾಜ್ಯದಿಂದ ಪ್ರತಿನಿಧಿಗಳನ್ಬು ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಸುಲೇಮಾನ್ ಕಲರ್ಫೆ, ರಾಜ್ಯ ಕಾರ್ಯದರ್ಶಿ ರಾಜನಾಯ್ಕ್ ಮತ್ತಿತರರು ಹಾಜರಿದ್ದರು.

Join Whatsapp
Exit mobile version