Home ಟಾಪ್ ಸುದ್ದಿಗಳು ಮಂಗಳೂರು | ಮೀನುಗಾರಿಕಾ ಬೋಟ್’ಗೆ ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ

ಮಂಗಳೂರು | ಮೀನುಗಾರಿಕಾ ಬೋಟ್’ಗೆ ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ

ಮಂಗಳೂರು: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಘಟನೆ ದಕ್ಕೆ ಬಂದರ್ ಬಳಿ ಇಂದು ಬೆಳಿಗ್ಗೆ 5 ಗಂಟೆಗೆ ನಡೆದಿದೆ.


ಲಂಗರು ಹಾಕಿದ್ದ ದೋಣಿಯಲ್ಲಿದ್ದ ಡೀಸೆಲ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಹಗ್ಗ ಬಿಚ್ಚಿ ಬಿಟ್ಟಿದ್ದರಿಂದ ದೋಣಿ ಕೆಲವು ದೂರ ನೀರಿನಲ್ಲಿ ಸಾಗಿತ್ತು. ಹಾಗಾಗಿ ಇತರ ದೋಣಿಗಳಿಗೆ ಬೆಂಕಿ ತಗುಲುವುದು ತಪ್ಪಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪಾಂಡೇಶ್ವರ ಅಗ್ನಿಶಾಮಕ ದಳ ಹಾಗೂ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ.

Join Whatsapp
Exit mobile version